ಕೊಪ್ಪಳ: ಹಳ್ಳದಲ್ಲಿ ಮಹಿಳೆಯರು ಕೊಚ್ಚಿಕೊಂಡು ಹೋದ ಘಟನೆ ಹಿನ್ನೆಲೆಯಲ್ಲಿ ದುರಂತ ನಡೆದ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಕನೂರು ಗ್ರಾಮಕ್ಕೆ ಸಚಿವ ಹಾಲಪ್ಪ ಆಚಾರ್ ಭೇಟಿ ನೀಡಿದರು.
ಇದೇ ವೇಳೆ ಗ್ರಾಮಸ್ಥರಿಂದ ಸಚಿವರಿಗೆ ಘೇರಾವ್ ಹಾಕಲಾಗಿದ್ದು, ಹಿಗ್ಗಾಮುಗ್ಗಾ ತರಾಟೆಗೂ ತೆಗೆದುಕೊಂಡಿದ್ದಾರೆ.ಸೇತುವೆ ನಿರ್ಮಾಣಕ್ಕೆ ಸ್ಥಳದಲ್ಲಿಯೇ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಸಾವನ್ನಪ್ಪಿದ್ದ ಮಹಿಳೆಯರ ಕುಟುಂಬದ ಯುವಕನಿಂದ ಆಕ್ರೋಶ ವ್ಯಕ್ತವಾಗಿದ್ದು, ಸೇತುವೆ ನಿರ್ಮಾಣ ಮಾಡಿಕೊಡಲು ಸಚಿವ ಹಾಲಪ್ಪರನ್ನು ಸಖತ್ತಾಗಿಯೇ ತರಾಟೆ ತೆಗೆದುಕೊಂಡಿದ್ದಾನೆ.
ಸೇತುವೆ ಕಾಮಗಾರಿ ಮಾಡಿ ಕೊಡುತ್ತೀನಿ ಅಂತಾ ಹೇಳುವವರೆಗೂ ಸಚಿವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ. ಇದೇ ವೇಳೆ ಯುವಕನಿಗೆ ಭರವಸೆ ನೀಡಿದ ಸಚಿವ ಹಾಲಪ್ಪ, ಮೃತರಿಗೆ ತಲಾ 5 ಲಕ್ಷ ರೂಪಾಯಿ ಘೋಷಣೆ ಮಾಡಿದ್ದಾರೆ. ಅಲ್ಲದೆ,ಸೇತುವೆ ಆಗುವವರೆಗೂ ನಿಮ್ಮ ಗ್ರಾಮಕ್ಕೆ ಬರುವುದಿಲ್ಲ ಅಂತಲೂ ಸಚಿವ ಹಾಲಪ್ಪ ಆಚಾರ್ ಪ್ರತಿಜ್ಞೆ ಮಾಡಿದ್ದಾರೆ.
PublicNext
02/10/2022 02:28 pm