ಕೊಪ್ಪಳ : ಜಿಲ್ಲೆಯಲ್ಲಿ ಭಾರೀ ಮಳೆ ಹಿನ್ನಲೆಯಲ್ಲಿ ರೈಲ್ವೆ ಸೇತುವೆ ಸಂಪೂರ್ಣಜಲಾವೃತವಾದ ಘಟನೆ ಕುಕನೂರು ತಾಲೂಕಿನ ದ್ಯಾಂಪುರ ಬಳಿ ನಡೆದಿದೆ.
ಅವೈಜ್ಞಾನಿಕ ರೈಲ್ವೆ ಕಾಮಗಾರಿ ನಿರ್ಮಾಣದ ಹಿನ್ನೆಲೆಯಲ್ಲಿ ಮಳೆಗಾಲದಲ್ಲಿ ಕೆಳಭಾಗದಲ್ಲಿ ನೀರು ನಿಂತುಕೊಳ್ಳುವ ಸ್ಥಿತಿ ನಿರ್ಮಾಣವಾಗುತ್ತದೆ.
ಇನ್ನೂ ಮಳೆ ನೀರು ನಿಂತ ಹಿನ್ನೆಲೆಯಲ್ಲಿ ವಾಹನ ಸವಾರರು ಪರದಾಟ ನಡೆಸುವುದು ಒಂದುಕಡೆಯಾದ್ರೆ ನಿಂತ ನೀರಲ್ಲಿ ಟ್ರಾಕ್ಟರ್ ಸಿಲುಕಿಕೊಂಡು ಕಾರ್ಮಿಕರು ಪರದಾಡಿದ್ದಾರೆ.
ಅಷ್ಟೇ ಅಲ್ಲದೆ ರೈಲ್ವೆ ಸೇತುವೆಯಿಂದ ಜಮೀನಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ.
PublicNext
11/10/2022 10:07 am