ಕೊಪ್ಪಳ: ಒಂದೆಡೆ ಸ್ಮಾರ್ಟ್ ಕ್ಲಾಸ್ ಉಪಕರಣ ಖರೀದಿಸಲು ಹಣ ಇಲ್ಲ ಎಂಬ ಕಾರಣಕ್ಕೆ ಮರ ಕಡಿದು ಅದರಿಂದ ಹಣ ಹೊಂದಿಸಲಾಗುತ್ತಿದೆ. ಅದೇ ಗ್ರಾಮದಲ್ಲಿ ಯುವಕ ನೇಣಿಗೆ ಶರಣಾಗಿದಕ್ಕೆ ಮರಗಳೇ ಕಾರಣ ಎಂದು ಗ್ರಾಮಸ್ಥರು ಮರ ಕಡಿಯುವ ಚಂಡಾಳ ಐಡಿಯಾ ಮಾಡಿದ್ದಾರೆ.
ಹೌದು ಕೊಪ್ಪಳದ ಕುಷ್ಟಗಿ ತಾಲೂಕಿನ ಮಾಲಗಿತ್ತಿ ಗ್ರಾಮದಲ್ಲಿ ಕೆಲ ಗ್ರಾಮಸ್ಥರು, ಮರಗಳ ಮಾರಣ ಹೋಮಕ್ಕೆ ಮುಂದಾಗಿದ್ದಾರೆ. ಇತ್ತೀಚೆಗೆ ಮಾಲಗಿತ್ತಿ ಗ್ರಾಮದಲ್ಲಿ ಯುವಕನೊರ್ವ ನೇಣಿಗೆ ಶರಣಾಗಿದ್ದ. ಯುವಕ ನೇಣಿಗೆ ಶರಣಾದ ಹಿನ್ನಲೆ ಗ್ರಾಮದಲ್ಲಿರುವ ಮರಗಳ ಕಡಿಯುತ್ತಿದ್ದಾರೆ. ಇನ್ನೊಂದೆಡೆ ಶಾಲೆಯ ಸ್ಮಾರ್ಟ್ ಕ್ಲಾಸ್ ಉಪಕರಣ ಖರೀದಿಸಲು ಹಣವಿಲ್ಲದ ಕಾರಣಕ್ಕೆ ಮೈದಾನದಲ್ಲಿದ್ದ ಮರಗಳ ಕಡಿಯುತ್ತಿದ್ದಾರೆ. ಶಾಲಾ ಅವರಣದಲ್ಲಿರುವ, ತೇಗ, ಸಾಗೂ ಮರಗಳನ್ನು ಗ್ರಾಮಸ್ಥರು ಕಡಿಸುತ್ತಿದ್ದಾರೆ. ಹತ್ತು ಸಾಗವಾನಿ ಮರಕ್ಕೆ 85 ಸಾವಿರ ರೂಪಾಯಿ ಪಡೆದುಕೊಂಡು ಮರಗಳನ್ನು ಕಡಿಸುತ್ತಿದ್ದಾರೆ. ಇದರ ನಡುವೆ ಮರಗಳನ್ನು ಕಡಿಯದಂತೆ ಗ್ರಾಮದ ಯುವಕರಿಂದ ಮನವಿ ಮಾಡಿದ್ರೂ ಸಹ ಯುವಕರಿಗೆ ಗ್ರಾಮದ ಕೆಲ ಜನ ಜೀವ ಬೆದರಿಕೆ ಹಾಕಿದ್ದಾರೆ.
Kshetra Samachara
06/10/2022 05:26 pm