ಕೊಪ್ಪಳ: ಬೈಕ್ ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡಿದ್ದ ವ್ಯಕ್ತಿಯ ಅಂಗಾಂಗಗಳನ್ನು ಕುಟುಂಬಸ್ಥರು ದಾನ ಮಾಡುವ ಮೂಲಕ ಇನ್ನೊಂದು ಜೀವಕ್ಕೆ ಬೆಳಕಾಗಿದ್ದಾರೆ.
ಕೊಪ್ಪಳ ತಾಲೂಕಿನ ಕುಣಕೇರಿ ತಾಂಡ ನಿವಾಸಿಯಾದ ಗಿರೀಶ ಕುರಿ ಎನ್ನುವವರು ಕಳೆದ ಭಾನುವಾರ ಬೈಕ್ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡದ ಎಸ್‌ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ನಿನ್ನೆ ಗಿರೀಶ್‌ನ ಮೆದುಳು ನಿಷ್ಕ್ರಿಯವಾಗಿದೆ. ಇನ್ನು
ನನ್ನ ಪತಿ ಇನ್ನಿಲ್ಲವಾದರೂ ಇನ್ನೊಬ್ಬರ ಜೀವ ಉಳಿಸಲಿ ಎಂದು ಗಿರೀಶ್ ನ ಪತ್ನಿ ಪತಿಯ ಅಂಗಾಗ ದಾನ ಮಾಡಿ ಮಾದರಿಯಾಗಿದ್ದಾರೆ.
PublicNext
23/09/2022 11:23 am