ಕನಕಗಿರಿ: ಮಾತಿನ ಚಕಮಕಿಯಲ್ಲಿ ನಡೆದು ಎರಡು ದಿನಗಳ ಹಿಂದೆ ಚಾಕು ಇರಿತಕ್ಕೆ ಒಳಪಟ್ಟಿದ್ದ ರವಿ (40) ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ರವಿ ಹಾಗೂ ಮುತ್ತುರಾಜ ಎಂಬ ಇಬ್ಬರು ಯುವಕರು ಆತ್ಮೀಯ ಗೆಳೆಯರಾಗಿದ್ದರು. ಈ ಎರಡು ದಿನದ ಹಿಂದೆ ರವಿಯ ಬೈಕ್ ಅನ್ನು ಗೆಳೆಯ ಮುತ್ತುರಾಜ ತೆಗೆದುಕೊಂಡು ಹೋಗಿ ತಡವಾಗಿ ಬಂದಿದ್ದ. 'ಏಕೆ ತಂದಿರುವೆ' ಎಂದು ರವಿಯು ಪ್ರಶ್ನಿಸಿದ್ದಕ್ಕೆ ಆಕ್ರೋಶಗೊಂಡ ಯುವಕ ಮುತ್ತುರಾಜ ಈರುಳ್ಳಿ ಕತ್ತರಿಸುವ ಚಾಕುವಿನಿಂದ ತನ್ನ ಗೆಳೆಯನಿಗೆ ಇರಿದಿದ್ದ.
ಈ ಸುದ್ದಿ ತಿಳಿದ ಕುಟುಂಬಸ್ಥರು ಸ್ಥಳೀಯ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರು ಗಂಗಾವತಿಗೆ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದರು. ಪುನಃ ಹೆಚ್ಚುವರಿ ಚಿಕಿತ್ಸೆ ಕೊಡಿಸಲು ವೈದ್ಯರು ಧಾರವಾಡ ಎಸ್ ಡಿ ಎಂ ಸಿ ಯಲ್ಲಿ ಚಿಕಿತ್ಸೆ ನೀಡುವಂತೆ ಹೇಳಿದಾಗ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಿಪ್ಪಿದ್ದಾನೆ.
ಆರೋಪಿ ಮುತ್ತುರಾಜ ಯುವಕನ ಮೇಲೆ ಪ್ರಕರಣ ದಾಖಲಾಗಿದ್ದು,ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.ಎಂದು ಪಿಐ ನಾರಾಯಣ ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
PublicNext
22/09/2022 11:32 pm