ಕೊಪ್ಪಳ : PFI ಕೊಪ್ಪಳ ಜಿಲ್ಲಾಧ್ಯಕ್ಷನಬ್ಯಾಂಕ್ ಅಕೌಂಟ್ ನೋಡಿ ಪೊಲೀಸರು ಇದೀಗ ದಂಗಾಗಿದ್ದಾರೆ.ಪಿಎಫ್ಐನ ಜಿಲ್ಲಾಧ್ಯಕ್ಷ ನಾಗಿರುವ ಅಬ್ದುಲ್ ಫಯಾಜ್ನಿಗೆ ಲಕ್ಷ ಲಕ್ಷ ಹಣ ವರ್ಗಾವಣೆ ಆಗಿರೋದು ಬಹಿರಂಗವಾಗಿದೆ. ಹಣ ವರ್ಗಾವಣೆ ಕಂಡು ಪೊಲೀಸ್ ಇಲಾಖೆ ದಂಗಾಗಿದ್ದು,ಅನಾಮಧೇಯ ಕಡೆಗಳಿಂದ ಹಣ ವರ್ಗಾವಣೆ ಆಗಿರುವ ಶಂಕೆ ವ್ಯಕ್ತವಾಗಿದೆ.
ಕೆನರಾ ಬ್ಯಾಂಕ್, ಎಚ್ಡಿಎಫ್ಸಿ, ಐಸಿಐಸಿಐ, ಎಸ್ಬಿಐ ಹಾಗೂ ಇಂಡಿಯನ್ ಬ್ಯಾಂಕ್ ಗಳಲ್ಲಿ ಅಕೌಂಟ್ ಹೊಂದಿರುವ ಫಯಾಜ್. ಬಜಾಜ್ ಫೈನಾನ್ಸ್ ನಲ್ಲಿ ಕೆಲಸ ಮಾಡ್ತಿದ್ದ. ಬಜಾಜ್ ಫೈನಾನ್ಸ್ ನಲ್ಲಿ ಕೆಲಸ ಮಾಡ್ತಿದ್ರೂ ಇಷ್ಟೊಂದು ಅಮೌಂಟ್ ವರ್ಗಾವಣೆ ಆಗಿರೋದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಸದ್ಯ ಕೆಜಿ ಹಳ್ಳಿ ಪೊಲೀಸರಿಂದಬಂಧನಕ್ಕೆ ಒಳಗಾಗಿದ್ದಾನೆ. ಇನ್ನು ಕೊಪ್ಪಳ ಜಿಲ್ಲೆಯ 50ಕ್ಕೂ ಹೆಚ್ಚು ಬ್ಯಾಂಕ್ ಗಳಿಗೆ ನೋಟೀಸ್ ನೀಡಿದ್ದ ಬೆಂಗಳೂರಿನ ಪುಲಿಕೇಶಿ ನಗರ ಪೊಲೀಸರಿಗೆ ಈ ಮಾಹಿತಿ ತಿಳಿದು ದಂಗಾಗಿದ್ದಾರೆ.
Kshetra Samachara
29/09/2022 11:09 am