ಕೊಪ್ಪಳ: ಹಳ್ಳದಲ್ಲಿ ನಾಲ್ವರು ಕೊಚ್ಚಿಕೊಂಡು ಹೋದ ಪ್ರಕರಣ ಸಂಬಂಧಿಸಿದಂತೆ ಮೂರು ಮಹಿಳೆಯರ ಮೃತದೇಹ ಪತ್ತೆಯಾಗಿದೆ.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಕನೂರು ಹಳ್ಳದಲ್ಲಿ ನಾಲ್ವರು ಮಹಿಳೆಯರು ಕೊಚ್ಚಿಹೋಗಿದ್ದ ಹೋಗಿದ್ದರು. ಇದೀಗ 40 ವರ್ಷದ ಭುವನೇಶ್ವರಿ ಪೊಲೀಸ್ ಪಾಟೀಲ್, 32 ವರ್ಷದ ಗಿರಿಜಾ ಮಾಲಿಪಾಟೀಲ್, 19 ವರ್ಷದ ವೀಣಾ ಪಾಟೀಲ ಅವರ ಮೃತದೇಹ ಪತ್ತೆಯಾಗಿದೆ. ಇನ್ನೂಅಗ್ನಿಶಾಮಕ ದಳದ ಸಿಬ್ಬಂದಿಯಿಂದ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಸ್ಥಳದಲ್ಲಿ ಪೊಲೀಸರು ಬೀಡುಬಿಟ್ಟಿದ್ದಾರೆ. ನಿನ್ನೆ ರಾತ್ರಿ ಹಳ್ಳದಲ್ಲಿ ನಾಲ್ವರು ಮಹಿಳೆಯರು ಕೊಚ್ಚಿಕೊಂಡು ಹೋಗಿದ್ದರು. ಇನ್ನುಳಿದ 45 ವರ್ಷದ ಪವಿತ್ರಾ ಪೊಲೀಸ್ ಪಾಟೀಲ್‌ಗಾಗಿ ಶೋಧ ಮುಂದುವರೆದಿದೆ. ನಿನ್ನೆ ಕೆಲಸಕ್ಕೆ ಹೋಗಿ ಮರಳಿ ಗ್ರಾಮಕ್ಕೆ ಬರುವಾಗ ಘಟನೆ ನಡೆದಿತ್ತು.
PublicNext
02/10/2022 12:25 pm