ಕೊಪ್ಪಳ : ಜಿಲ್ಲೆಯ ಕನಕಗಿರಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮುಖ್ಯ ಕಾನ್ಸ್ ಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಶಿವುಪುತ್ರಪ್ಪ ಗುಳೇದಗುಡ್ಡ ಅವರು ಆಯ ತಪ್ಪಿ ಬಾವಿಯಲ್ಲಿ ಬಿದ್ದು ಸಾವನ್ನಪ್ಪಿದ ಘಟನೆ ಶುಕ್ರವಾರದಂದು ನಡೆದಿದೆ.
ಮಧ್ಯಾಹ್ನ ಊಟದ ಸಮಯದಲ್ಲಿ ಎ.ಪಿ.ಎಂ.ಸಿ. ಬಳಿ ಇರುವ ವೆಂಕಟಾಚಲಪತಿ ಬಾವಿಯ ಕಡೆ ವಿಶ್ರಾಂತಿಗೆ ತೆರಳಿದಾಗ ಕಾಲು ಜಾರಿ ಬಾವಿಯಲ್ಲಿ ಕಾನ್ಸ್ ಟೇಬಲ್ ಶಿವಪುತ್ರಪ್ಪ ಬಿದ್ದಿದ್ದಾರೆ. ಪೊಲೀಸ್ ಪೇದೆಯನ್ನು ಕೂಡಲೇ ಅಲ್ಲಿರುವ ಕೂಲಿ ಕಾರ್ಮಿಕರು ಬಂದು ರಕ್ಷಣೆ ಕೆಲಸ ಮಾಡಿ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಶಿವಪುತ್ರಪ್ಪ ಕೊನೆಯುಸಿರೆಳೆದ್ದಾರೆ. ಸ್ಥಳಕ್ಕೆ ಎಸ್ಪಿ ಎ.ಗಿರಿ ಆಗಮಿಸಿದ್ದು, ಹೆಚ್ಚಿನ ಮಾಹಿತಿಗಾಗಿ ಪರಿಶೀಲನೆ ನಡೆಸಿದರು. ಇದೇ ವೇಳೆ ಶಿವಪುತ್ರಪ್ಪ ಕುಟುಂಬಕ್ಕೆ ಸಾಂತ್ವನ ಹೇಳಿದರು.
Kshetra Samachara
23/09/2022 10:13 pm