ಶ್ರೀನಿವಾಸಪುರ : ರಸ್ತೆ ಬದಿ ಅಂಗಡಿ ಒತ್ತುವರಿ ತೆರವು ಕಾರ್ಯಾಚರಣೆಗೆ ಅಂಗಡಿ ಮಾಲೀಕರು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ರು. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದ ಎಂ ಜಿ ರಸ್ತೆಯಲ್ಲಿ
ಪುರಸಭೆ ಅಧಿಕಾರಿಗಳ ನೇತೃತ್ವದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತಿದ್ದು
ಒತ್ತುವರಿ ತೆರವುಗೊಳಿಸುವ ವೇಳೆ ಅಂಗಡಿ ಮಾಲೀಕರು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿದೆ.
ಯಾವುದೇ ಮಾಹಿತಿ ನೀಡದೇ ಏಕಾಏಕಿ ಒತ್ತುವರಿ ತೆರವು ಮಾಡುತ್ತಿದ್ದಾರೆಂದು ಅಂಗಡಿ ಮಾಲೀಕರು ಆರೋಪಿಸಿದರೆ ಸ್ಥಳಕ್ಕೆ ಜಿಲ್ಲಾಧಿಕಾರಿ ತಾಲ್ಲೂಕು ದಂಡಾಧಿಕಾರಿಗಳು ಬರುವಂತೆ ಅಂಗಡಿ ಮಾಲೀಕರ ಒತ್ತಾಯಿಸಿದಾರೆ.
ಪ್ರಧಾನ ಮಂತ್ರಿ ಸ್ವಾನಿಧಿಯೋಜನೆಯಲ್ಲಿ ನೀವೇ ಹಣ ಕೊಡಿಸಿದ್ದೀರಿ. ಅಂಗಡಿ ತೆರವು ಮಾಡಿದರೆ ಹಣ ಮರುಪಾವತಿ ಮಾಡುವುದು ಹೇಗೆಂದು ಮಹಿಳೆಯ ಪ್ರಶ್ನೆಮಾಡಿದರೆ ಕನಿಷ್ಠ ಸಭೆ ಮಾಡದೆ ಮಾಹಿತಿ ನೀಡದೆ ತೆರವು ಮಾಡುತ್ತಿದ್ದಾರೆಂದು ಆಕ್ರೋಶವನ್ನು ವ್ಯಕ್ತಪಡಿಸಿದರು.
PublicNext
04/10/2024 03:38 pm