ಗದಗ: ಸ್ವಾತಂತ್ರ್ಯ ಅಮೃತ ಮಹೋತ್ಸವನ್ನು ವಿಶೇಷ ವರ್ಣರಂಜಿತ ಆಚರಿಸಲು ಸರ್ಕಾರ ಆ.13 ರಿಂದ 15 ರವರೆಗೆ ಹರ್ ಘರ್ ತಿರಂಗಾ ಎಂಬ ಘೋಷವಾಕ್ಯದೊಂದಿಗೆ ರಾಷ್ಟಧ್ವಜ ಹಾರಿಸಿ ರಾಷ್ಟಭಕ್ತಿ ಅಭಿವ್ಯಕ್ತಗೊಳಿಸುವ ಉದ್ದೇಶ ಹೊಂದಿದ್ದು, ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ 40 ಸಾವಿರ ರಾಷ್ಟಧ್ವಜಗಳು ಸಿದ್ದಗೊಂಡಿವೆ.
ಜಿಲ್ಲೆಯಲ್ಲಿ 3,17,759 ಮನೆಗಳಿದ್ದು, ಪ್ರತಿ ಮನೆಗೆ ಒಂದರಂತೆ ಮತ್ತು ಸಂಘ ಸಂಸ್ಥೆ ಸರ್ಕಾರಿ ಕಚೇರಿಗಳು ಸೇರಿದಂತೆ ಒಟ್ಟು 3,20,000 ಧ್ವಜಗಳ ಅವಶ್ಯಕತೆಯಿದೆ. ಈಗಾಗಲೇ ಸರ್ಕಾರದಿಂದ ಬಹುತೇಕ ಧ್ವಜಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಬಂದಿದೆ. ಅವುಗಳನ್ನು ಜಿಲ್ಲಾಡಳಿತದ ಮೂಲಕ ಜಿಲ್ಲಾದ್ಯಾಂತ ವಿತರಿಸುವ ಕಾರ್ಯ ಮಾಡಲಾಗುತ್ತಿದೆ. 40 ಸಾವಿರ ಧ್ವಜಗಳ ಸಿದ್ಧತೆಯ ಜವಾಬ್ದಾರಿ ವಹಿಸಿಕೊಂಡಿರುವ ಜಿಪಂ ಮಹಿಳಾ ಸ್ವಸಹಾಯ ಸಂಘಗಳಿಗೆ ಧ್ವಜ ನಿರ್ಮಾಣದ ಕೆಲಸ ಹಂಚಿಕೆ ಮಾಡಿ ಯಶಸ್ವಿಯಾಗಿದೆ.
PublicNext
13/08/2022 05:47 pm