ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕ್ರೀಡಾಪಟುಗಳಿಗೆ ಗುಡ್‌ನ್ಯೂಸ್: ರೈಲ್ವೆ ಇಲಾಖೆಯಲ್ಲಿ ಉದ್ಯೋಗಾವಕಾಶ

ಹುಬ್ಬಳ್ಳಿ: ಹುಬ್ಬಳ್ಳಿಯ ನೈರುತ್ಯ ರೈಲ್ವೇ ಪರ್ಸೋನೆಲ್ ಡಿಪಾರ್ಟ್‍ಮೆಂಟ್‌ನಿಂದ ಕ್ರೀಡಾಪಟುಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.ವಿವಿಧ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದೆ.

ನೈರುತ್ಯ ರೈಲ್ವೆ ವಲಯದಲ್ಲಿ ಲೆವೆಲ್ 2/3 ದರ್ಜೆಯ ಉದ್ಯೋಗ ಒದಗಿಸಲಾಗುತ್ತಿದ್ದು, 2020-21ನೇ ಸಾಲಿನ ನೇಮಕಾತಿ ಇದಾಗಿದೆ. ಹುದ್ದೆಗಳಲ್ಲಿ ಮೀಸಲಾತಿ ಇಲ್ಲ, 21 ಹುದ್ದೆಗಳಲ್ಲಿ 2 ಮಹಿಳಾ ಅಭ್ಯರ್ಥಿಗಳಿಗೆ ಸ್ಥಾನ ಇದೆ.

ಯಾವ ಕ್ರೀಡಾಪಟುಗಳಿಗೆ ಅವಕಾಶ?

* ಅಥ್ಲೆಟಿಕ್ಸ್

– 400 ಮೀ. ಹರ್ಡಲ್ಸ್ – 1

– ಲಾಂಗ್ ಜಂಪ್ – 2

– 5000/10000 ಮೀ – 1

– 800/ 1500 ಮೀ. – 1

* ಬ್ಯಾಡ್ಮಿಂಟನ್

– ಸಿಂಗಲ್/ಡಬಲ್ – 2

*ವೇಟ್‍ಲಿಫ್ಟಿಂಗ್

– 55 ಕೆಜಿ – 1

– 102 ಕೆಜಿ – 1

* ಟೇಬಲ್ ಟೆನಿಸ್

-ಸಿಂಗಲ್/ ಡಬಲ್ -1

* ಕ್ರಿಕೆಟ್

– ಆಫ್ ಸ್ಪಿನ್ನರ್ ವಿತ್ ಬ್ಯಾಟ್ಸ್‌ಮನ್ – 1

– ಮಿಡಲ್ ಆರ್ಡರ್ ಬ್ಯಾಟ್ಸ್‌ಮನ್ – 1

– ಮೀಡಿಯಂ ಪೇಸರ್ – 1

* ಹಾಕಿ

– ಹಾಫ್​ ಬ್ಯಾಕ್ – 2

– ಫುಲ್ ಬ್ಯಾಕ್ – 1

– ಫಾರ್ವಡ್ – 1

* ಸ್ವಿಮಿಂಗ್

– 50/100/200 ಮೀ. ಫ್ರೀಸ್ಟೈಲ್ – 1

– 50/100/200 ಮೀ. ಬ್ಯಾಕ್‍ಸ್ಟ್ರೋಕ್ – 1

* ಗಾಲ್ಫ್ – 2

ಶೈಕ್ಷಣಿಕ ಅರ್ಹತೆ: ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ, ಡಿಪ್ಲೋಮಾ ಜತೆ ಕ್ರೀಡಾ ಸಾಧನೆಗಳು ಅವಶ್ಯ.

ವಯೋಮಿತಿ: 1.1.2021ಕ್ಕೆ ಕನಿಷ್ಠ 18 ವರ್ಷ, ಗರಿಷ್ಠ 25 ವರ್ಷ.

ಅರ್ಜಿ ಶುಲ್ಕ: ಎಸ್‍ಸಿ, ಎಸ್‍ಟಿ, ಮಾಜಿ ಸೈನಿಕ, ಅಂಗವಿಕಲ, ಮಹಿಳಾ, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 250 ರೂ. ನಿಗದಿಪಡಿಸಿದ್ದು, ಇತರ ಅಭ್ಯರ್ಥಿಗಳಿಗೆ 500 ರೂ. ಭರಿಸಬೇಕು. ಟ್ರಯಲ್‍ಗೆ ಹಾಜರಾಗುವ ಅಭ್ಯರ್ಥಿಗಳಿಗೆ ಮೊತ್ತವನ್ನು ಹಿಂತಿರುಗಿಸಲಾಗುವುದು.

ಯಾವ ಸಾಧನೆ ಪರಿಗಣನೆ?

* ಕೆಟಗರಿ ಎ, ಬಿ, ಸಿ ಎಂದು ವಿಭಾಗ ಮಾಡಿದ್ದು, ಒಲಿಂಪಿಕ್ ಗೇಮ್, ವರ್ಲ್ಡ್ ಕಪ್, ವರ್ಲ್ಡ್ ಚಾಂಪಿಯನ್‍ಷಿಪ್, ಏಷಿಯನ್ ಗೇಮ್ಸ್, ಕಾಮನ್‍ವೆಲ್ತ್ ಗೇಮ್ಸ್, ಯೂಥ್ ಒಲಿಂಪಿಕ್ಸ್, ಡೇವಿಸ್ ಕಪ್, ಚಾಂಪಿಯನ್ಸ್ ಟ್ರೋಫಿ, ಥಾಮಸ್/ಊಬರ್ ಕಪ್, ಕಾಮನ್‍ವೆಲ್ತ್ ಚಾಂಪಿಯನ್‍ಷಿಪ್, ಏಷಿಯನ್ ಚಾಂಪಿಯನ್‍ಷಿಪ್/ ಏಷಿಯಾ ಕಪ್, ಸೌತ್ ಏಷಿಯಾ ಫೆಡರೇಷನ್ ಗೇಮ್ಸ್, ಯುಎಸ್‍ಐಸಿ (ವರ್ಲ್ಡ್ ರೈಲ್ವೆ) ಚಾಂಪಿಯನ್‍ಷಿಪ್, ವರ್ಲ್ಡ್ ಯನಿವರ್ಸಿಟಿ ಗೇಮ್ಸ್‍ಗಳಲ್ಲಿ ದೇಶವನ್ನು ಪ್ರತಿನಿಧಿಸಿರಬೇಕು. ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಸಾಧನೆ ಮಾಡಿರಬೇಕು.

ಅರ್ಜಿ ಸಲ್ಲಿಸಲು ಕೊನೇ ದಿನ: 28.12.2020

ಅಧಿಸೂಚನೆಗೆ ಇಲ್ಲಿ ಕ್ಲಿಕ್​ ಮಾಡಿ : https://bit.ly/37JgNAr

ಮಾಹಿತಿಗೆ ಇಲ್ಲಿ ಕ್ಲಿಕ್​ ಮಾಡಿ: http://www.rrchubli.in

Edited By : Vijay Kumar
PublicNext

PublicNext

09/12/2020 06:46 pm

Cinque Terre

102.44 K

Cinque Terre

2