ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ʼಕೆಫೆ ಕೆಲಸಕ್ಕೆ ಬೆಕ್ಕುಗಳು ಬೇಕಾಗಿದ್ದಾವೆʼ, ಚೀನಾದಲ್ಲಿ ಸೌಂಡ್‌ ಮಾಡುತ್ತಿದೆ ಹೊಸ ಟ್ರೆಂಡ್

ಕೆಫೆ ಕೆಲಸಕ್ಕೆ ಬೆಕ್ಕುಗಳು ಬೇಕಾಗಿದ್ದಾವೆ,ಒಳ್ಳೆಯ ನಡವಳಿಕೆ ಮತ್ತು ಆರೋಗ್ಯಕರವಾದ ಬೆಕ್ಕುಗಳಿದ್ದರೆ ಕೂಡಲೇ ಸಂಪರ್ಕಿಸಿ, ಈ ರೀತಿಯ ಪೋಸ್ಟ್‌ ಒಂದು ಚೈನಾದಲ್ಲಿ ಇಂಟರ್‌ ನೆಟ್‌ ನಲ್ಲಿ ಹರಿದಾಡುತ್ತಿದೆ.ಆಯ್ಕೆ ಆದ ಬೆಕ್ಕುಗಳಿಗೆ ದಿನ ನಿತ್ಯದ ಆಹಾರದ ಜೊತೆಗೆ ಬೆಕ್ಕಿನ ಮಾಲಿಕರ ಪ್ರೆಂಡ್ಸ್‌ ಗೆ 30 ಪ್ರತಿಶತ ರಿಯಾಯಿತಿಯನ್ನು ಈ ಕೆಫೆಯಲ್ಲಿ ನೀಡಲಾಗುವುದು.ಆರಂಭದಲ್ಲಿ ಇಂತಹ ಒಂದು ಪ್ರಾಣಿಗಳಿಗೆ ಉದ್ಯೋಗ ಕುರಿತು ಪೋಸ್ಟ್‌ ವಿಲಕ್ಷಣ ಅನಿಸಿದ್ರೂ ಈಗ ಚೈನಾ ದಲ್ಲಿ ಇದು ಟ್ರೆಂಡ್‌ ಆಗಿದೆ.ಫರ್‌ ಪ್ರೆಂಡ್ಸ್‌ ರೆಸ್ಟೋರೆಂಟ್‌ ಗಳಲ್ಲಿ ಓಡಾಡಿಕೊಂಡು ಇದ್ದರೆ ಬರುವ ಗ್ರಾಹಕರಿಕೂ ಆಹ್ಲಾದಕರ ಎನಿಸುವುದು ಹಾಗೂ ಕೆಫೆಗಳು ಪ್ರವೇಶ ಶುಲ್ಕವನ್ನು ವಿಧಿಸಬಹುದು ಎಂಬುವುದು ಈ ಕಾಂಸೆಪ್ಟ್‌ ನ ಉದ್ದೇಶ ಇದನ್ನು ಚೀನಾದಲ್ಲಿ "ಝೆಂಗ್ಮಾಟಿಯೊಕಿಯಾನ್" ಎಂದು ಕರೆಯಲಾಗುತ್ತದೆ ಅಂದರೆ ʼಸ್ನ್ಯಾಕ್ ಹಣವನ್ನು ಸಂಪಾದಿಸಿʼ ಎಂದು. ಪೆಟ್‌ ಪೇರೆಂಟ್ಸ್‌ ಕೆಲಸಕ್ಕೆ ಹೋದಾಗ ಅವರ ಸಾಕು ಪ್ರಾಣಿಗಳನ್ನು ಈ ರೀತಿ ಕೆಫೆಗಳಲ್ಲಿ ಬಿಟ್ಟು ಹೋಗಬಹುದು ಇದೊಂದತರ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುವ ರೀತಿ.

Edited By : Somashekar
PublicNext

PublicNext

21/10/2024 07:29 pm

Cinque Terre

21.59 K

Cinque Terre

0