ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಐಟಿ ಕಂಪನಿ ಎಂಜಿನಿಯರ್ ನೇಮಕಾತಿ ದಿಡೀರ್ ರದ್ದು, ಹೆಲ್ಪ್ ಲೈನ್ ಆರಂಭ

ಸಾವಿರಾರು ಎಂಜಿನಿಯರಿಂಗ್‌ ಪದವೀಧರರಿಗೆ ನೀಡಿದ್ದ ನೇಮಕಾತಿ ಆದೇಶವನ್ನು ವಿಪ್ರೋ, ಇನ್ಫೋಸಿಸ್‌, ಅಕ್ಸೆಂಚರ್‌, ಟೆಕ್‌ ಮಹೀಂದ್ರಾ ಸೇರಿದಂತೆ ಐಟಿ ವಲಯದ ದಿಗ್ಗಜ ಕಂಪೆನಿಗಳು ಹಿಂಪಡೆದಿವೆ ಎಂದು ಐಟಿ ವೃತ್ತಿಪರರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಪ್ರವೀಣ್‌ ಚಂದ್ರಹಾಸ್‌ ಧ್ವನಿ ಎತ್ತಿದ್ದಾರೆ.

ಹೌದು ! ಎಂಜಿನಿಯರಿಂಗ್‌ ಪದವೀಧರರಿಗೆ ಉದ್ಯೋಗ ಖಾತ್ರಿಯ ಆದೇಶಪತ್ರ ಕೊಟ್ಟು ಬಳಿಕ ಕಾರಣವಿಲ್ಲದೆ ನೇಮಕಾತಿ ರದ್ದು ಮಾಡುವುದು ದೇಶದಲ್ಲಿ ರಾಷ್ಟ್ರೀಯ ಸಮಸ್ಯೆಯಾಗಿದ್ದು ಉದ್ಯೋಗ ವಂಚಿತ ಪದವೀಧರರ ಸಹಾಯಕ್ಕಾಗಿ ಐಟಿ ವೃತ್ತಿಪರರ ವೇದಿಕೆಯು 7673985813 ಸಂಖ್ಯೆಯ ಸಹಾಯವಾಣಿ ಆರಂಭಿಸಿದೆ.

ಜತೆಗೆ ಈ ವೇದಿಕೆಯು ಸಮಸ್ಯೆಯನ್ನು ಕೇಂದ್ರ ಸರಕಾರದ ಗಮನಕ್ಕೆ ತರಲು ನಿರ್ಧರಿಸಿ ಎಂಜಿನಿಯರ ಭವಿಷ್ಯದ ಬಗ್ಗೆ ಚಿಂತನೆ ಸಹ ನಡೆಸಿದೆ.

ಬೆಂಗಳೂರು, ಹೈದರಾಬಾದ್‌, ಚೆನ್ನೈ, ಪುಣೆ ಮತ್ತು ಮುಂಬೈನಲ್ಲಿ 3 ಸಾವಿರಕ್ಕೂ ಹೆಚ್ಚು ಎಂಜಿನಿಯರಿಂಗ್‌ ಪದವೀಧರರನ್ನು ಕೆಲಸಕ್ಕೆ ನೇಮಿಸಿಕೊಂಡಿರುವುದಾಗಿ ಆದೇಶಪತ್ರ ನೀಡಿದ್ದ ಐಟಿ ಕಂಪೆನಿಗಳು ಇದೀಗ ಏಕಾಏಕಿ ನೇಮಕಾತಿ ರದ್ದುಪಡಿಸಿವೆ.

ಆರೇಳು ತಿಂಗಳ ಹಿಂದೆ ಉದ್ಯೋಗದ ಆದೇಶಪತ್ರ ಪಡೆದು ವೃತ್ತಿ ಬದುಕು ಆರಂಭಿಸುವ ನಿರೀಕ್ಷೆಯಲ್ಲಿದ್ದ ಎಂಜಿನಿಯರಿಂಗ್‌ ಪದವೀಧರರಿಗೆ ಕಂಪೆನಿ ಕೈಗೊಂಡ ಕ್ರಮ ಆಘಾತ ನೀಡಿದೆ," ಎಂದು ಐಟಿ ವೃತ್ತಿಪರರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಪ್ರವೀಣ್‌ ಚಂದ್ರಹಾಸ್‌ ತಿಳಿಸಿದ್ದಾರೆ.

"ಪ್ರತಿಷ್ಠಿತ ಐಟಿ ಕಂಪೆನಿಗಳೇ ನೇಮಕಾತಿ ಆದೇಶ ನೀಡಿದ್ದರಿಂದ ಪದವೀಧರರು ಬೇರೆಡೆ ಕೆಲಸಕ್ಕೆ ಸೇರುವ ಪ್ರಯತ್ನ ಮಾಡಿರಲಿಲ್ಲ. ಇದೀಗ ಐಟಿ ಕಂಪೆನಿಗಳ ಅನಿರೀಕ್ಷಿತ ನಡೆಯಿಂದ ಪದವೀಧರರ ಬದುಕು ಬೀದಿಗೆ ಬಂದಿದೆ. ಕಂಪೆನಿಗಳ ನೇಮಕಾತಿ ಆದೇಶಪತ್ರ ಕಾನೂನುಬದ್ಧವಾಗಿದ್ದು, ಉದ್ಯೋಗ ವಂಚಿತರ ಪರವಾಗಿ ಕಾನೂನಾತ್ಮಕ ಹೋರಾಟ ನಡೆಸುತ್ತೇವೆ. ಕಂಪೆನಿಗಳು ಸರಿಯಾಗಿ ಪ್ರತಿಕ್ರಿಯಿಸಬೇಕು ಮತ್ತು ಸೂಕ್ತ ಸ್ಪಷ್ಟತೆ ನೀಡಬೇಕು ಎಂದು ಹೇಳಿದ್ದಾರೆ.

Edited By :
PublicNext

PublicNext

07/10/2022 11:46 am

Cinque Terre

23.66 K

Cinque Terre

0

ಸಂಬಂಧಿತ ಸುದ್ದಿ