ಬೆಂಗಳೂರು: ತೈಲ ವಿತರಣಾ ಕಂಪನಿಗಳು ವಾಣಿಜ್ಯ ಸಿಲಿಂಡರ್‌ಗಳ ದರದಲ್ಲಿ ತುಸು ಇಳಿಕೆ ಮಾಡಿವೆ. ಇಂದಿನಿಂದಲೇ ಜಾರಿಗೆ ಬರುವಂತೆ 19 ಕೆಜಿ ಸಿಲಿಂಡರ್ ಬೆಲೆಯಲ್ಲಿ 25.50 ರೂಪಾಯಿ ಇಳಿಸಿವೆ. ಇದು ಬೆಲೆ ಏರಿಕೆಯ ಬಿಸಿ ನಡುವೆ ದರ ಇಳಿಸಿರುವುದು ತುಸು ಸಮಾಧಾನ ತಂದಿದೆ.
ಅಕ್ಟೋಬರ್ 1ರಿಂದ ಮಹಾನಗರಗಳಲ್ಲಿ 19 ಕೆಜಿ ವಾಣಿಜ್ಯ LPG ಸಿಲಿಂಡರ್‌ಗಳ ಬೆಲೆಯನ್ನು ತೈಲ ವಿತರಣಾ ಕಂಪನಿಗಳು ಕಡಿತಗೊಳಿಸಿವೆ. ಲಿಮಿಟೆಡ್ ಪ್ರಕಾರ, LPG ಸಿಲಿಂಡರ್‌ನ ಬೆಲೆ ಪ್ರತಿ ಯೂನಿಟ್‌ಗೆ 25.50 ರೂ.ವರೆಗೆ ಇಳಿಕೆ ಮಾಡಲಾಗಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ತಿಳಿಸಿದೆ. ಕಳೆದ ತಿಂಗಳ ಮೊದಲ ದಿನ ಕೂಡ ವಾಣಿಜ್ಯ LPG ಸಿಲಿಂಡರ್‌ಗಳ ಬೆಲೆಯನ್ನು ಕಡಿತಗೊಳಿಸಲಾಗಿತ್ತು. 2 ತಿಂಗಳಲ್ಲಿ 2ನೇ ಬಾರಿಗೆ ದರ ಇಳಿಕೆ ಕಾಣುತ್ತಿರುವುದು ಹೋಟೆಲ್‌ಗಳು, ರೆಸ್ಟೋರೆಂಟ್‌ಗಳ ತಿನಿಸಿನ ದರದಲ್ಲೂ ಸ್ವಲ್ಪ ಕಡಿಮೆಯಾಗುವ ನಿರೀಕ್ಷೆಯಿದೆ.
ಹಬ್ಬದ ಸೀಸನ್ ಕಾರಣ ಎಲ್‌ಪಿಜಿ ಬೆಲೆಯನ್ನು ಸರ್ಕಾರ ಸರ್ಕಾರ ಪರಿಷ್ಕರಿಸಿದೆ. ಆದರೆ, ದೇಶಿಯ ಎಲ್‌ಪಿಜಿ ಸಿಲಿಂಡರ್‌ನಲ್ಲಿ ಯಾವುದೇ ದರ ಬದಲಾವಣೆ ಮಾಡಲಾಗಿಲ್ಲ. ಇಳಿಕೆ ಬಳಿಕ ಇಂದಿನಿಂದ ದೆಹಲಿಯಲ್ಲಿ 19 ಕೆಜಿಯ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ 1,885 ರೂಪಾಯಿ ಬದಲಿಗೆ 1,859 ರೂಪಾಯಿ. ಕೋಲ್ಕತ್ತಾದಲ್ಲಿ 1,959 ರೂಪಾಯಿ, ಮುಂಬೈನಲ್ಲಿ 1,811.50 ರೂ. ಮತ್ತು ಚೆನ್ನೈನಲ್ಲಿ 2,009.50 ರೂ. ಇರಲಿದೆ.
PublicNext
01/10/2022 06:29 pm