ಕಾರವಾರ: ಹಬ್ಬದ ವಿಶೇಷ ಸಂದರ್ಭದಲ್ಲಿ ಬೆಂಗಳೂರಿನ ಯಶವಂತಪುರ– ಮುರುಡೇಶ್ವರ ನಡುವೆ ವಿಶೇಷ ರೈಲು ಸಂಚಾರವನ್ನು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
ರೈಲು ನಂ.06563 ಯಶವಂತಪುರ-ಮುರುಡೇಶ್ವರ ಹಬ್ಬದ ವಿಶೇಷ ಎಕ್ಸ್ಪ್ರೆಸ್ ರೈಲು ಅ.1ರ ಶನಿವಾರ ರಾತ್ರಿ 11:55ಕ್ಕೆ ಯಶವಂತಪುರದಿಂದ ಹೊರಟು ಮರುದಿನ ಅಪರಾಹ್ನ 12:55ಕ್ಕೆ ಮುರ್ಡೇಶ್ವರ ತಲುಪಲಿದೆ.
ನಂತರ ರೈಲು ನಂ. 06544 ಮುರುಡೇಶ್ವರ- ಯಶವಂತಪುರ ವಿಶೇಷ ಎಕ್ಸ್ಪ್ರೆಸ್ ರೈಲು ಅ.2ರಂದು ಭಾನುವಾರ ಮಧ್ಯಾಹ್ನ 1:30ಕ್ಕೆ ಮುರುಡೇಶ್ವರದಿಂದ ಹೊರಟು ಸೋಮವಾರ ಬೆಳಗಿನ ಜಾವ 4 ಗಂಟೆಗೆ ಯಶವಂತಪುರ ನಿಲ್ದಾಣ ತಲುಪಲಿದೆ. ಈ ರೈಲು ಏಳು ಸ್ಲೀಪರ್ ಕೋಚ್, 4 ಸೆಕೆಂಡ್ ಸೀಟಂಗ್ ಕೋಚ್ ಸೇರಿದಂತೆ ಒಟ್ಟು 16 ಎಲ್ಎಚ್ಬಿ ಬೋಗಿಗಳನ್ನು ಹೊಂದಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮಾರ್ಗ ಹೀಗಿದೆ: ಈ ರೈಲಿಗೆ ಚಿಕ್ಕ ಬಾಣಾವರ, ನೆಲಮಂಗಲ, ಕುಣಿಗಲ್, ಶ್ರವಣಬೆಳಗೊಳ, ಚೆನ್ನರಾಯಪಟ್ಟಣ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕ-ಪುತ್ತೂರು, ಬಂಟ್ವಾಳ, ಸುರತ್ಕಲ್, ಮುಲ್ಕಿ, ಉಡುಪಿ, ಬಾರಕೂರು, ಕುಂದಾಪುರ, ಮೂಕಾಂಬಿಕಾ ರೋಡ್ ಬೈಂದೂರು ಹಾಗೂ ಭಟ್ಕಳಗಳಲ್ಲಿ ನಿಲುಗಡೆ ಇರುತ್ತದೆ.
PublicNext
30/09/2022 08:02 am