ದೆಹಲಿ : ಜರ್ಮನಿಯ ವಿಮಾನಮಾನ ಸಂಸ್ಥೆ ಲುಫ್ಥಾನ್ಸ ಏರಿ ಲೈನ್ಸ್ ಇಂದು ಜರ್ಮನಿಯಿಂದ ಹೊರಡುವ ಮತ್ತು ಆಗಮಿಸುವ ಬಹುತೇಕ 800 ವಿಮಾನಗಳ ಸಂಚಾರವನ್ನು ರದ್ದುಗೊಳಿಸಿದೆ.
ಈ ಪರಿಣಾಮವಾಗಿ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟಿ-3 ಟರ್ಮಿನಲ್ಲಿನಲ್ಲಿ ಸುಮಾರು 700 ಪ್ರಯಾಣಿಕರು ತೊಂದರೆಯಾಗಲಿದೆ ಎಂದು ವಿಮಾನಯಾನ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಸದ್ಯ ಲುಫ್ಥಾನ್ಸ ವಿಮಾನಯಾನ ಸಂಸ್ಥೆ ಎಲ್ಲಾ ಪೈಲೆಟ್'ಗಳು ವೇತನ ಹೆಚ್ಚಿಸುವ ಪ್ರಸ್ತಾವನೆಯನ್ನು ಕಂಪನಿ ಮುಂದೆ ಇಡಲಾಗಿತ್ತು, ಆದ್ರೇ ಕಂಪನಿ ಈ ಪ್ರಸ್ತಾವನೆ ತಿರಸ್ಕರಿಸಿದ ಕಾರಣ ಪೈಲಟ್'ಗಳು ಒಂದು ದಿನ ವಿಶ್ವಾದಾದ್ಯಂತ ಮುಷ್ಕರಕ್ಕೆ ಮುಂದಾಗಿದ್ದಾರೆ.
ಈ ಪರಿಣಾಮ ವಿಮಾನಯಾನ ಹಾರಾಟ ರದ್ದಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ, ಇತ್ತ ಪ್ರಯಾಣಿಕರು ಸಹ ದೆಹಲಿ ಏರಪೋರ್ಟ್'ನಲ್ಲಿ ವಿ ವಾಂಟ್ ಜಸ್ಟೀಸ್ ನಮಗೆ ನ್ಯಾಯ ಕೊಡಿ ಎಂದು ಏರ್ಪೋರ್ಟ್ ಕಾರಿಡಾರ್ ಬಳಿ ಕೂತು ಪ್ರತಿಭಟಿಸುತ್ತಿದ್ದಾರೆ.
PublicNext
03/09/2022 12:32 pm