ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಣ್ಣೆ ಹಳ್ಳದ ತಟದಲ್ಲಿರುವ ಗ್ರಾಮಗಳಿಗೆ ಜಿಲ್ಲಾಡಳಿತದಿಂದ ಮುನ್ಸೂಚನೆ

ಗದಗ: ಮಳೆಯ ಆರ್ಭಟಕ್ಕೆ ನದಿಗಳು ಹಳ್ಳಕೊಳ್ಳಗಳು ಅಪಾಯದ ಮಟ್ಟ ಮೀರಿ ಉಕ್ಕಿ ಹರಿಯುತ್ತಿದೆ. ನೀರಿನ ರಭಸಕ್ಕೆ ಬೆಣ್ಣೆ ಹಳ್ಳದಲ್ಲಿ ಪ್ರವಾಹದ ಮುನ್ಸೂಚನೆ ಸಿಕ್ಕಿದೆ. ಸದ್ಯ ಸೇತುವೆ ಮುಳುಗಡೆ ಹಿನ್ನೆಲೆ ವಾಹನ ಸಂಚಾರ ಸ್ಥಗಿತಗೊಂಡಿದೆ.

ಗದಗ ಜಿಲ್ಲೆಯಲ್ಲಿ ಬೆಣ್ಣೆ ಹಳ್ಳ ಮೈದುಂಬಿ ಹರಿಯುತ್ತಿದೆ. ಜಿಲ್ಲೆಯ ನರಗುಂದ ತಾಲೂಕಿನ ಕುರ್ಲಗೇರಿ ಗ್ರಾಮದ ಬಳಿರುವ ಸೇತುವೆ ಮುಳಗುಡೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ನರಗುಂದ ಪಟ್ಟಣಕ್ಕೆ ತೆರಳುವ ವಾಹನ ಸವಾರರು ಆತಂಕಕ್ಕೆ ಒಳಗಾಗಿದ್ದಾರೆ. ರೋಣ ತಾಲೂಕಿನ ಯಾವಗಲ್ ಗ್ರಾಮದ ಬಳಿರುವ ಸೇತುವೆ ಸಂಪೂರ್ಣ ಜಲಾವೃತವಾಗಿದೆ. ಯಾವಗಲ್ ಗ್ರಾಮದ ಜನರು ನರಗುಂದಕ್ಕೆ ಹೋಗಿರುವ ಅವರು ಮರಳಿ ಮನೆಗೆ ಹೋಗದೆ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ.ಇದರಿಂದ ಬೆಣ್ಣೆ ಹಳ್ಳದ ತಟ್ಟದಲ್ಲಿರುವ ಗ್ರಾಮಗಳಿಗೆ ಜಿಲ್ಲಾಡಳಿತ ಹೈ ಅಲರ್ಟ್ ಘೋಷಣೆ ಮಾಡಿದೆ.

Edited By : Nagesh Gaonkar
PublicNext

PublicNext

31/08/2022 07:13 pm

Cinque Terre

31.44 K

Cinque Terre

0

ಸಂಬಂಧಿತ ಸುದ್ದಿ