ಪಾವಗಡ: ತಾಲೂಕಿನ ಬ್ಯಾಡನೂರು ಪಂಚಾಯತಿ ಕೊಟಬಂಡೆ ಗ್ರಾಮದಲ್ಲಿ ಊರಿನಿಂದ ಜಮೀನುಗಳಿಗೆ ಹೋಗಲು ನಕಾಶೆ ದಾರಿ ಇದ್ದರೂ ಕೂಡ ಒತ್ತುವರಿಯಾಗಿ ಎಷ್ಟೋ ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ದಾರಿಯನ್ನು ತೆರವುಗೊಳಿಸಲು ರೈತರಿಂದ ಇತ್ತೀಚೆಗೆ ತಹಶೀಲ್ದಾರ್ ರವರಿಗೆ ಅರ್ಜಿ ನೀಡಲಾಗಿತ್ತು. ತಾಲ್ಲೂಕು ರೈತ ಸಂಘದ ಅಧ್ಯಕ್ಷರಾದ ಜಿ. ನರಸಿಂಹ ರೆಡ್ಡಿ, ಉಪಾಧ್ಯಕ್ಷ ಬಡಪ್ಪ ಅಧಿಕಾರಿಗಳೊಂದಿಗೆ ಚರ್ಚಿಸಿ ಸರ್ವೆ ಕಾರ್ಯಕ್ಕೆ ಮುಂದಾಗಿ ಶುಕ್ರವಾರ ತಾಲ್ಲೂಕು ಸರ್ವೇಯರ್ ಚಂದ್ರಶೇಖರ್, ರೆವಿನ್ಯೂ ಅಧಿಕಾರಿ ಗಿರೀಶ್, ರಂಗನಾಥ್, ಊರಿನ ಮುಖಂಡರಾದ ಈರಹನುಮಪ್ಪ, ನಾರಾಯಣಪ್ಪ, ಗೊಂಚಿಗಾರ್ ಈರಪ್ಪ, ಗೋವಿಂದಪ್ಪ, ಗೋಪಾಲಪ್ಪ, ತಿಮ್ಮಪ್ಪ ನಾಗಪ್ಪ ದೊಡ್ಡೀರಪ್ಪ, ಕೃಷ್ಣಪ್ಪ ಮತ್ತು ನೂರಕ್ಕು ಹೆಚ್ಚು ಜನರು ಸರ್ವೇ ಕಾರ್ಯಕ್ಕೆ ಭಾಗವಹಿಸಿ.
ಎಲ್ಲಾ ವೈಷಮ್ಯವನ್ನು ಬಿಟ್ಟು ಸೌಹಾರ್ದಯುತವಾಗಿ ರೈತ ಸಂಘದ ಅಧ್ಯಕ್ಷರ ಒಪ್ಪಿಗೆ ಮೇರಿಗೆ ಸಭೆ ಸೇರಿ, ಊರಿನಿಂದ ಸುಮಾರು ಎರಡು ಕಿಲೋಮೀಟರ್ ದಾರಿಯನ್ನು ಕೂಲಂಕುಷವಾಗಿ ರೈತರು ಒತ್ತುವರಿ ದಾರಿ ಬಿಡಲು ಒಪ್ಪಿ ಊರಿನ ರೈತರಿಗೆ ಜಮೀನುಗಳಿಗೆ ಓಡಾಡಲು ಯಾವುದೇ ತಕರಾರು ಇಲ್ಲದೆ ಅಧಿಕಾರಿಗಳೊಂದಿಗೆ ಉತ್ತಮವಾಗಿ ಸ್ಪಂದಿಸಿ ನಕಾಶೆ ದಾರಿಯನ್ನು ಎಲ್ಲಾ ರೈತರು ಸಮ್ಮತಿಯಿಂದ ತೆರವುಗೊಳಿಸಿದಂತ ಕೊಟಬಂಡೆ ಊರಿನ ಎಲ್ಲಾ ರೈತ ಭಾಂದವರಿಗೂ ಪಾವಗಡ ತಾಲ್ಲೂಕು ರೈತ ಸಂಘ ಅಭಿನಂದನೆ ಸಲ್ಲಿಸಿತು. ರೈತ ಸಂಘದ ಕಾರ್ಯಕ್ಕೆ ತಾಲೂಕಿನಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.
PublicNext
22/07/2022 05:50 pm