ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ತುರುವೇಕೆರೆ ಬೀದಿ ವ್ಯಾಪಾರಿಗಳಿಗೆ ಸ್ಥಳಾಂತರಕ್ಕೆ ವಿರೋಧ

ತುರುವೇಕೆರೆ: ಪಟ್ಟಣದ ಬೀದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸುವ ಕೆಲಸ ಆಗುತ್ತಿದೆ, ಇದು ನಿಲ್ಲಬೇಕು ಎಂದು ತುರುವೇಕೆರೆ ಬೀದಿ ವ್ಯಾಪಾರಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದರು.

ಬೀದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಮಾರುತಿ ಅಧಿಕಾರಿಗಳಿಗೆ ಪ್ರಶ್ನೆ ಮಾಡಿ ಸ್ಥಳಾಂತರ ಮಾಡದಂತೆ ಅಧಿಕಾರಿಗಳಿಗೆ ತಾಕೀತು ಮಾಡಿ ಯಾವುದೇ ಮೂಲಭೂತ ಸೌಕರ್ಯ ಇಲ್ಲದ ಜಗಕ್ಕೆ ನಮ್ಮನ್ನು ಹೋಗಿ ಹೋಗಲು ಹೇಗೆ ಸಾಧ್ಯ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ತುರುವೇಕೆರೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನೆ ನಡೆಸಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮತ್ತು ತಹಶೀಲ್ದಾರ್‌ಗೆ ಮನವಿಯನ್ನು ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಸಿಐಟಿಯು ಸತೀಶ್, ಜಯಕರ್ನಾಟಕ ವೆಂಕಟೇಶ್, ಆಟೋ ಚಾಲಕರ ಸಂಘದ ಗಂಗಣ್ಣ, ಬೀದಿ ವ್ಯಾಪಾರಿ ಸಂಘದ ಉಮೇಶ್, ವ್ಯಾಪಾರಿಗಳಾದ ವೆಂಕಟೇಶ್, ಗಂಗಮ್ಮ, ಚಿದಾನಂದ್ ಇದ್ದರು.

Edited By :
PublicNext

PublicNext

19/07/2022 11:42 am

Cinque Terre

30.71 K

Cinque Terre

0

ಸಂಬಂಧಿತ ಸುದ್ದಿ