ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಥಣಿ: ಇದ್ದೂ ಇಲ್ಲದಂತಾದ ಸಾರ್ವಜನಿಕ ಶೌಚಾಲಯ !

ವರದಿ- ಸಂತೋಷ ಬಡಕಂಬಿ

ಅಥಣಿ: ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣದ ಲೀಡಕರ್ ಕಾಲನಿ ಹಾಗೂ ರಾಜೀವ್ ಗಾಂಧಿ ಕಾಲನಿಗಳಲ್ಲಿರುವ ಸಾರ್ವಜನಿಕ ಶೌಚಾಲಯವು ಇದ್ದೂ ಉಪಯೋಗವಿಲ್ಲದಂತಾಗಿದೆ!

ಎಲ್ಲಿ ನೋಡಿದರೂ ಅಲ್ಲಿ ಹೊಲಸು, ಗಲೀಜು. ಸಮೀಪ ಹೋದರೆ ಸಾಕು. ದುರ್ನಾತ ಬೀರುವ ಈ ಸಾರ್ವಜನಿಕ ಶೌಚಾಲಯದಲ್ಲಿ ಯಾವುದೇ ನೀರಿನ ಸೌಲಭ್ಯವಿಲ್ಲ, ಸಾರ್ವಜನಿಕರಿಗೆ ಅನುಕೂಲವಾಗಲಿ ಎಂಬ ಉದ್ದೇಶಕ್ಕಾಗಿ ಲಕ್ಷ ಲಕ್ಷ ರೂಪಾಯಿ ವ್ಯಯಿಸಿ ಈ ಶೌಚಾಲಯ ನಿರ್ಮಾಣ ಮಾಡಿದ್ದು, ಅದು ಇದೀಗ ಯಾರಿಗೂ ಕೂಡ ಉಪಯೋಗಕ್ಕೆ ಬಾರದೇ ಇರುವ ಸ್ಥಿತಿ ನಿರ್ಮಾಣವಾಗಿದೆ.

ಸ್ಥಳೀಯರ ಅನಿಸಿಕೆ ಪ್ರಕಾರವಾಗಿ ಪುರಸಭೆಯವರು ಕಾಟಾಚಾರಕ್ಕೆ ಇಲ್ಲಿ ಶೌಚಾಲಯ ನಿರ್ಮಾಣ ಮಾಡಿದ್ದು ಅದರ ನಿರ್ವಹಣೆಯನ್ನು ತಾವು ಮಾಡದೆ, ನಿರ್ವಹಣೆಯನ್ನು ಯಾರಿಗೂ ವಹಿಸಿಕೊಡದೆ ಸರಕಾರದಿಂದ ಬಂದ ಅನುದಾನವನ್ನು ಪೋಲು ಮಾಡುತ್ತಿದ್ದಾರೆ. ಈ ಕುರಿತು ನಾವುಗಳು ಸಾಕಷ್ಟು ಬಾರಿ ಪುರಸಭೆಗೆ ಮನವಿ ಮಾಡಿದರೂ ಕೂಡ ಪ್ರಯೋಜನವಿಲ್ಲ ಎಂದು ಹೇಳುತ್ತಿದ್ದಾರೆ ಸ್ಥಳೀಯರು.

ಇನ್ನಾದರೂ ಸಂಬಂಧಪಟ್ಟ ಪುರಸಭೆ ಅಥವಾ ತಾಲೂಕಾ ಆಡಳಿತದವರು ಈ ಸಾರ್ವಜನಿಕ ಶೌಚಾಲಯವನ್ನು ಬಳಕೆಗೆ ಅನುಕೂಲ ಮಾಡಿಕೊಡುತ್ತಾರಾ ಅಥವಾ ಇಲ್ಲವೋ ಎಂದು ಕಾದು ನೋಡಬೇಕಿದೆ !

Edited By : Manjunath H D
PublicNext

PublicNext

17/07/2022 03:18 pm

Cinque Terre

32.49 K

Cinque Terre

0

ಸಂಬಂಧಿತ ಸುದ್ದಿ