ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು-ಹುಬ್ಬಳ್ಳಿ ರೈಲು ಸಂಚಾರ ಇನ್ಮುಂದೆ ಮತ್ತಷ್ಟು ಸುಲಭ !

ಬೆಂಗಳೂರು: ಹುಬ್ಬಳ್ಳಿ ಮತ್ತು ಬೆಂಗಳೂರು ಸಂಚಿರಸೋ ಜನಕ್ಕೆ ಈಗೊಂದು ಸಿಹಿ ಸುದ್ದಿ. ಮುಂದಿನ ವರ್ಷ-2023 ಮಾರ್ಚ್‌ಗೆ ಹುಬ್ಬಳ್ಳಿ ಮತ್ತು ಬೆಂಗಳೂರು ನಡುವೆ ಓಡಾಡೋ ರೈಲು ವಿದ್ಯುತ್ ಚಾಲಿತವಾಗಲಿವೆ.

ಹೌದು. ಈಗಾಗಲೇ ಈ ಕೆಲಸ ಶುರು ಆಗಿದೆ.ಬರೋ ವರ್ಷ ಮಾರ್ಚ್ ತಿಂಗಳ ಹೊತ್ತಿಗೆ ಈ ಕಾಮಗಾರಿ ಪೂರ್ಣಗೊಳುತ್ತದೆ. ಜೋಡಿ ಹಳಿ ನಿರ್ಮಾಣ ಇದನನ್ ಟ್ರಾಯಕ್ ಡಬ್ಲಿಂಗ್ ಅಂತಲೂ ಕರೆಯುತ್ತಾರೆ. ಇದರ ಜೊತೆಗೆ ರೈಲು ಮಾರ್ಗದ ವಿದ್ಯುದೀಕರಣವೂ ನಡೆಯುತ್ತಿದೆ.

ಈ ಒಂದು ಹೊಸ ವ್ಯವಸ್ಥೆಯಿಂದ ಹುಬ್ಬಳ್ಳಿ ಮತ್ತು ಬೆಂಗಳೂರು ನಡುವಿನ ಸಂಚಾರದ ಸಮಯ 45 ನಿಮಿಷದಿಂದ 1 ಗಂಟೆಯಷ್ಟು ಕಡಿಮೆ ಆಗಲಿದೆ. ಜೋಡಿ ಹಳಿ ನಿರ್ಮಾಣದಿಂದ ಪ್ರಯಾಣಿಕರ ಸಂಖ್ಯೆ ಮತ್ತು ಸರಕು ಸಾಗಾಣೆ ರೈಲುಗಳ ಸಂಖ್ಯೆಯನ್ನೂ ಹೆಚ್ಚಿಸಲು ಅನುಕೂಲ ಆಗುತ್ತದೆ ಎಂದು ನೈರುತ್ಯ ರೈಲ್ವೆ ವಿಭಾಗ ಅಧಿಕೃತವಾಗಿಯೇ ಮಾಹಿತಿ ಕೊಟ್ಟಿದೆ.

Edited By :
PublicNext

PublicNext

03/05/2022 09:33 am

Cinque Terre

25.73 K

Cinque Terre

3