ಮುಂಬೈ: ಭಾರತದ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಏಪ್ರಿಲ್ ಲೆಕ್ಕದಂತೆ ಶೇಕಡ 7.83 ರಷ್ಟು ಏರಿಕೆ ಆಗಿದೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಈ ಸತ್ಯವನ್ನ ಈಗ ಹೇಳಿದೆ.
ಕಳೆದ ಮಾರ್ಚ್ ನಲ್ಲಿ ನಿರುದ್ಯೋಗ ಸಮಸ್ಯೆ ಶೇಕಡ 7.6 ರಷ್ಟು ಮಾತ್ರ ಇತ್ತು. ನಗರ ಪ್ರದೇಶದಲ್ಲಿ ಶೇಕಡ 9.22 ರಷ್ಟು ಆಗಿತ್ತು. ಗ್ರಾಮೀಣ ಪ್ರದೇಶದಲ್ಲಿ 7.18 ರಷ್ಟು ನಿರುದ್ಯೋಗ ಸಮಸ್ಯೆ ಇತ್ತು.
ಆದರೆ ಹರಿಯಾಣದಲ್ಲಿ ಅತಿ ಹೆಚ್ಚು ನಿರುದ್ಯೋಗ ಸಮಸ್ಯೆ ಇದೆ. ಶೇಕಡ 34.5 ರಷ್ಟು ನಿರುದ್ಯೋಗ ಸಮಸ್ಯೆ ಇಲ್ಲಿ ತಾಂಡವ ಆಡುತ್ತಿದೆ. ರಾಜಸ್ಥಾನ ಶೇಕಡ 28 ರಷ್ಟು,ಬಿಹಾರ್ ಶೇಕಡ-21 ರಷ್ಟು,ಜಮ್ಮು ಮತ್ತು ಕಾಶ್ಮೀರದಲ್ಲಿ ಶೇಕಡ 15.6 ರಷ್ಟು ನಿರುದ್ಯೋಗ ಸಮಸ್ಯೆ ಇದೆ.
PublicNext
03/05/2022 08:14 am