ಬೆಂಗಳೂರು: ಬೆಂಗಳೂರು-ತುಮಕೂರು ರೈಲು ಮಾರ್ಗದ ವಿದ್ಯುದೀಕರಣ ಕಾಮಗಾರಿ ಮುಕ್ತಾಯಗೊಂಡಿದೆ. ಎಲೆಕ್ಟ್ರಿಕ್ ರೈಲುಗಳು ಶುಕ್ರವಾರದಿಂದ ಕಾರ್ಯಾಚರಣೆ ಆರಂಭಿಸಿವೆ. ಇದರಿಂದ ಉಭಯ ನಗರಗಳ ನಡುವೆ ಸಂಚಾರ ನಡೆಸುವ ಜನರಿಗೆ ಸಹಾಯಕವಾಗಿದೆ. ವಾಣಿಜ್ಯ ಮತ್ತು ಅನುಕೂಲದ ಅನೇಕ ಕಾರಣಗಳಿಗಾಗಿ ರಾಜಧಾನಿಗೆ ಸಾವಯವವಾಗಿ ಸಂಪರ್ಕ ಹೊಂದಿದ ನಗರ ಎಂದರೆ ತುಮಕೂರು. ಪ್ರತಿ ದಿನ ಬೆಂಗಳೂರಿಗೆ ಲಕ್ಷಾಂತರ ಜನರು ಪ್ರಯಾಣಿಸುತ್ತಾರೆ. ಹೀಗೆ ದೈನಂದಿನ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಪರಿಣಾಮಕಾರಿ ಮತ್ತು ಹಸಿರು ಚಲನಶೀಲತೆಯ ಪರಿಹಾರವನ್ನು ಒದಗಿಸುವುದರಿಂದ ಎಲೆಕ್ಟ್ರಿಕ್ ರೈಲುಗಳ ಪ್ರಯಾಣಿಕರಿಗೆ ಹೆಚ್ಚು ಅನುಕೂಲ ಆಗಲಿದೆ.
ತುಮಕೂರು ನಗರದ ರೈಲು ನಿಲ್ದಾಣದಿಂದ ಪ್ರತಿನಿತ್ಯ ತುಮಕೂರು ನಡುವೆ ಸಂಚರಿಸುವ ಮೆಮು ವಿಶೇಷ ರೈಲು ಸಂಚಾರಕ್ಕೆ ಸಂಸದ ಜಿ.ಎಸ್.ಬಸವರಾಜು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ರೈಲು ಪ್ರಯಾಣಿಕರ ಬಹುದಿನಗಳ ಬೇಡಿಕೆ ಈ ದಿನ ಈಡೇರಿದಂತಾಗಿದೆ. ತುಮಕೂರು ಮತ್ತು ಬೆಂಗಳೂರಿನ ಕೆಎಸ್‌ಆರ್ ರೈಲು ನಿಲ್ದಾಣದ ನಡುವೆ ಸಂಚರಿಸುವ ಈ ವಿದ್ಯುತ್‌ಚಾಲಿತ ರೈಲು ಸೇವೆಯಿಂದ ಮುಖ್ಯವಾಗಿ ಕಾರ್ಮಿಕರು, ರೈತಾಪಿ ವರ್ಗದವರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಸೌತ್ ವೆಸ್ಟರ್ನ್ ರೈಲ್ವೇ ಎರಡು ಡೀಸೆಲ್ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್ ರೇಕ್‍ಗಳನ್ನು ಎಲೆಕ್ಟ್ರಿಕ್ ರೈಲುಗಳಾಗಿ ಪರಿವರ್ತಿಸಲು ಸೂಚನೆ ನೀಡಿದೆ. ಬೆಂಗಳೂರು ಮತ್ತು ಅರಸೀಕೆರೆ (06273/4) ನಡುವಿನ ಡಿಇಎಂಯು ವಿಶೇಷ ರೈಲಿನ ರೇಕ್ ಅನ್ನು 17 ಕೋಚ್ಗಳ ಎಲೆಕ್ಟ್ರಿಕ್ ರೈಲಿಗೆ ಬದಲಾಯಿಸಲಾಗುವುದು, ಇದು 15 ಜನರಲ್ ಸೀಟ್ ಮತ್ತು ಎರಡು ಆಸನ ಮತ್ತು ಲಗೇಜ್ ಕೋಚ್‍ಗಳನ್ನು ಹೊಂದಿದೆ.
PublicNext
10/04/2022 10:55 pm