ದೇವನಹಳ್ಳಿ : ಈ ಮೊದಲು 10 ಅಂತರಾಷ್ಟ್ರೀಯ ವಿಮಾನಗಳು ಮಾತ್ರ ದೇವನಹಳ್ಳಿಯಿಂದ ಸಂಚರಿಸುತ್ತಿದ್ದವು. ಈಗ ಪ್ರಯಾಣಿಕರ ಅನುಕೂಲ ಮತ್ತು ಪ್ರಯಾಣಿಕರು ಹೆಚ್ಚು ಕಾಯುವುದನ್ನು ತಪ್ಪಿಸಲು KIA ಈಗ 25 ವಿಮಾನಗಳ ಹಾರಾಟ ಶುರುಮಾಡಿದೆ. 21ವಿಮಾನಗಳು ವಿದೇಶಗಳ ಗುರ್ತಿಸಲ್ಪಟ್ಟ 24 ಸ್ಥಳಗಳಿಗೆ ವಿಮಾನ ಸಂಚರಿಸಲಿವೆ.
ಈ ವರ್ಷ KIA ಪ್ರಯಾಣಿಕರ ಅನುಕೂಲಕ್ಕಾಗಿ ಹೊಸಮಾರ್ಗಗಳ ಹುಡುಕಾಟ ನಡೆಸಿದೆ. ಅಮೇರಿಕಾದ ಸಿಯಾಟೆಲ್ ಹಾಗು ಸ್ಯಾನ್ ಫ್ರಾನ್ಸಿಸ್ಕೋ ಗಳಿಗೂ ವಿಮಾನ ಸಂಚರಿಸಲಿವೆ. ವಿಮಾನಗಳ ಹಾರಾಟದ ನಡುವೆ ಟ್ರಾಫಿಕ್ ಜಾಮ್ ಮುಕ್ತ ಮಾಡಲು ಅಟೋಮೇಷನ್ ನನ್ನು ಸನ್ನದ್ಧನ್ನು ಅಳವಡಿಸಲಾಗಿದೆ. ಟರ್ಮಿನಲ್ ಎಂಟ್ರಿ, ಇನ್, ಸೆಕ್ಯುರಿಟಿ ಚಕ್, ಇಮಿಗ್ರೇಷನ್ & ಕಸ್ಟಮ್ಸ್ ನಲ್ಲಿ ಅಳವಡಿಸಲಾಗಿದೆ.
ಮುಂದೇ ಪ್ರಯಾಣಿಕರ ಸಂಖ್ಯೆ ಶೇ 19ರಷ್ಟು ಹೆಚ್ಚಳ ಸಾಧ್ಯತೆ ಹಿನ್ನಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಮೂಲಸೌಲಭ್ಯಗಳ ಕೊರತೆ ನೀಗಿಸಲು ಮೂಲ ಸೌಲಭ್ಯಗಳ ಹೆಚ್ಚಳ ಅತಿಮುಖ್ಯ. ಬೆಂಗಳೂರು ದಕ್ಷಿಣಭಾರತದ ವರ್ಗಾವಣೆಯ ಕೇಂದ್ರವಾಗಿದೆ.
ದೇಶಿಯವಾಗಿ 74 ಕಡೆ ವಿಮಾನ ಹಾರಾಟ ನಡೆಯುತ್ತಿದೆ.
ದೇಶಿಯ ಮತ್ತು ಅಂತರಾಷ್ಟ್ರೀಯ ಜನಮನ್ನಣೆ ಗಳಿಸಿರುವುದರ ಜೊತೆಗೆ ದೇವನಹಳ್ಳಿಯ ಕೆಂಪೇಗೌಡ ವಿಮಾನನಿಲ್ದಾಣ ಈ ವರ್ಷ "ವಿಂಗ್ಸ್ ಆಫ್ ಇನ್ನೊವೇಷನ್ ಏವಿಯೇಷನ್" ಹಾಗು 'ಭಾರತದ ಮೊದಲ ಸುಂದರ ವಿಮಾನ ನಿಲ್ದಾಣ' ಎಂಬ ಬಿರುದುಗಳು KIA ಗೆ ಸಂದಾಯವಾಗಿದೆ.
PublicNext
03/04/2022 10:06 am