ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೊಡ್ಡಬಳ್ಳಾಪುರ: ಅರ್ಕಾವತಿ ನದಿಪಾತ್ರ ಕೆರೆಗಳು 'ವಿಷಮಯ'; ಪ್ಲೋರೆಡ್ ಅಂಶ ಪತ್ತೆ!

ದೊಡ್ಡಬಳ್ಳಾಪುರ : 20 ವರ್ಷಗಳ ನಂತರ ಅರ್ಕಾವತಿ ನದಿ ಪಾತ್ರದ ಕೆರೆಗಳು ತುಂಬಿ ಹರಿಯುತ್ತಿದೆ. ಈ ಕೆರೆಗಳಿಗೆ ದೊಡ್ಡಬಳ್ಳಾಪುರ ನಗರಸಭೆ ಒಳಚರಂಡಿ ನೀರು ಮತ್ತು ಬಾಶೆಟ್ಟಿಹಳ್ಳಿ ಕೈಗಾರಿಕೆ ಪ್ರದೇಶದ ತ್ಯಾಜ್ಯ ನೀರು ಸೇರಿ ಕೆರೆಯ ಬಣ್ಣ ಕಪ್ಪು ಬಣ್ಣಕ್ಕೆ ತಿರುಗಿದೆ!

ಕೆರೆನೀರನ್ನು ಪ್ರಯೋಗಾಲಯಕ್ಕೆ ಕಳಿಸಿದಾಗ ಅಪಾಯಕಾರಿ ಮಟ್ಟದಲ್ಲಿ ಪ್ಲೋರೈಡ್ ಅಂಶ ಪತ್ತೆಯಾಗಿದ್ದು, ಬಳಕೆಗೆ ಯೋಗ್ಯವಲ್ಲ ಎಂಬ ಆತಂಕಕಾರಿ ವಿಷಯ ವರದಿಯಲ್ಲಿ ಬಂದಿದೆ.

ದೊಡ್ಡಬಳ್ಳಾಪುರ ನಗರಸಭೆಯ ಒಳಚರಂಡಿ ನೀರು ಶುದ್ಧೀಕರಣ ಮಾಡದೆ ನೇರವಾಗಿ ಅರ್ಕಾವತಿ ನದಿ ಪಾತ್ರದ ಚಿಕ್ಕತುಮಕೂರು ಕೆರೆಗೆ ಬಿಡಲಾಗುತ್ತಿದೆ. ಈ ಕೆರೆ ನೀರು ಕೋಡಿ ಬಿದ್ದು ದೊಡ್ಡತುಮಕೂರು ಕೆರೆ ಸೇರುತ್ತಿದೆ. ಜೊತೆಗೆ ಬಾಶೆಟ್ಟಿಹಳ್ಳಿ ಕೈಗಾರಿಕೆ ಪ್ರದೇಶದ ತ್ಯಾಜ್ಯ ನೀರು ಸಹ ದೊಡ್ಡತುಮಕೂರು ಕೆರೆ ಸೇರುತ್ತಿದೆ.

ದೊಡ್ಡತುಮಕೂರು ಗ್ರಾಪಂ ಕೆರೆ ನೀರನ್ನು ಪ್ರಯೋಗಾಲಯಕ್ಕೆ ಕಳಿಸಿದ್ದು, ವರದಿಯಲ್ಲಿ ಕೆರೆಯ ನೀರಿನಲ್ಲಿ ಅಪಾಯಕಾರಿ ಮಟ್ಟದಲ್ಲಿ ಪ್ಲೋರೈಡ್ ಆಂಶ 2.10 ಇದೆ, ನೀರು ವಾಸನೆಯಿಂದ ಕೂಡಿ ಮಲಿನವಾಗಿದ್ದು, ನೀರು ಬಳಕೆಗೆ ಯೋಗ್ಯವಾಗಿಲ್ಲ ಎಂಬ ವರದಿ ಬಂದಿದೆ.

ಕೆರೆ ಕೋಡಿ ಬಿದ್ದಿರುವ ಖುಷಿಯನ್ನು ಪ್ರಯೋಗಾಲಯದ ವರದಿ ಗ್ರಾಮಸ್ಥರಿಂದ ಕಿತ್ತುಕೊಂಡಿದೆ. ದೊಡ್ಡಬಳ್ಳಾಪುರ ನಗರಸಭೆಯ ಒಳಚರಂಡಿ ನೀರು ಮತ್ತು ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ತ್ಯಾಜ್ಯ ನೀರು ಶುದ್ಧೀಕರಣ ಮಾಡಿ ಕೆರೆಗೆ ಬಿಡಿ. ಇಲ್ಲವಾದಲ್ಲಿ ಮುಂಬರುವ ವಿಧಾನ ಪರಿಷತ್ ಚುನಾವಣೆ ಬಹಿಷ್ಕರಿಸುವ ಎಚ್ಚರಿಕೆಯನ್ನು ದೊಡ್ಡತುಮಕೂರು ಪಂಚಾಯತ್ ಸದಸ್ಯರು ನೀಡಿದ್ದಾರೆ.

Edited By : Shivu K
PublicNext

PublicNext

27/11/2021 11:21 am

Cinque Terre

41.85 K

Cinque Terre

1

ಸಂಬಂಧಿತ ಸುದ್ದಿ