ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅನಾಹುತಕ್ಕೆ ಆಹ್ವಾನ-ಶಿಥಿಲಗೊಂಡ ಪಾಲಿಕೆ ಕಟ್ಟಡಗಳಿಗೆ ಇಲ್ಲ ಕಾರ್ಯಾಚರಣೆ

ಹುಬ್ಬಳ್ಳಿ: ಅದು ಬೆಂಗಳೂರು ಬಿಟ್ಟರೆ ರಾಜ್ಯದಲ್ಲೇ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ. ಆದರೆ ಆ ಮಹಾನಗರ ಪಾಲಿಕೆ ಆವರಣದಲ್ಲಿರುವ 50ಕ್ಕೂ ಅಧಿಕ ವರ್ಷ ಹಳೆಯದಾದ ಕಟ್ಟಡ ಇದೀಗ ಅನಾಹುತದ ಮುನ್ಸೂಚನೆ ನೀಡುತ್ತಿದ್ದರೂ ಅಧಿಕಾರಿಗಳು ಮಾತ್ರ ನಿರ್ಲಕ್ಷ ಧೋರಣೆ ತೋರುತ್ತಿದ್ದಾರೆ. ಏನದು ಸಮಸ್ಯೆ ಪಾಲಿಕೆಯ ಕಟ್ಟಡದ ದುಸ್ತಿತಿಯಾದರೂ ಏನು ಅಂತ ತೋರಿಸ್ತೀವಿ ನೊಡಿ.

ಹೀಗೆ ಕಾಣುತ್ತಿರುವ ಕಟ್ಟಡ ನೋಡಿದರೆ ಯಾವುದೋ ವಾಣಿಜ್ಯ ಕಟ್ಟಡ ಅಲ್ಲ. ಇದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಕಟ್ಟಡ. 50 ವರ್ಷ ಹಳೆಯದಾಗಿರುವ ಈ ಕಟ್ಟಡದಲ್ಲಿ ನೂರಾರು ಜನ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಾರೆ.‌ ಅಲ್ಲದೆ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಈ ಪಾಲಿಕೆ ಕಚೇರಿಗೆ ತಮ್ಮ ವಿವಿಧ ಕೆಲಸಗಳಿಗಾಗಿ ಆಗಮಿಸುತ್ತಾರೆ. ಆದರೆ 50 ವರ್ಷ ಹಳೆಯದಾದ ಈ ಕಟ್ಟಡಕ್ಕೆ ಆಗಮಿಸಲು ಅಧಿಕಾರಿಗಳು ಹಾಗೂ ಜನಸಾಮಾನ್ಯರು ಹಿಂದು ಮುಂದು ನೋಡ್ತಾರೆ. ಯಾಕಂದ್ರೆ 50 ವರ್ಷ ಹಳೆಯದಾದ ಈ ಕಟ್ಟಡದಲ್ಲಿ ಈಗಾಗಲೇ ದೊಡ್ಡ ದೊಡ್ಡ ಬಿರುಕು ಮೂಡಿದ್ದು, ಶಿಥಿಲಾವಸ್ಥೆಗೆ ತಲುಪಿದೆ. ಹೀಗಾಗಿ ದೊಡ್ಡ ಅನಾಹುತದ ಮುನ್ಸೂಚನೆ ನೀಡುತ್ತಿದೆ. ಅಲ್ಲದೇ ಅವಳಿನಗರದಲ್ಲಿ ಸುಮಾರು 50ಕ್ಕೂ ಹೆಚ್ಚು ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳಿವೆ...

ಇನ್ನೂ ಪ್ರಮುಖವಾಗಿ ಕಳೆದೆರೆಡು ಮೂರು ವರ್ಷಗಳ ಹಿಂದಷ್ಟ ಧಾರವಾಡದಲ್ಲಿ ಬಹುದೊಡ್ಡ ಕಟ್ಟಡವೊಂದು ಕುಸಿದು 19 ಜನ ಕಾರ್ಮಿಕರು ಅಸುನೀಗಿದ್ದರು.‌ ಆದರೆ ಆ ಘಟನೆಯಿಂದಾಗಿ ಪಾಲಿಕೆ ವ್ಯಾಪ್ತಿಯ ಅನೇಕ ಜನ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು. ಆದರೂ ಸಹ ಇದುವರೆಗೂ ಅಧಿಕಾರಿಗಳು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಇನ್ನೂ ಮುಖ್ಯವಾಗಿ ಪಾಲಿಕೆಯ ಆವರಣದಲ್ಲಿರುವ ಬಹುದೊಡ್ಡ ಕಟ್ಟಡವೇ ಬಿರುಕು ಮೂಡುವ ಮೂಲಕ ಸಂಪೂರ್ಣ ಶಿಥಿಲಗೊಂಡು ಅಪಾಯದ ಮುನ್ಸೂಚನೆ ನೀಡುತ್ತಿದ್ದರೂ ಅಧಿಕಾರಿಗಳು ಮಾತ್ರ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಹೀಗಾಗಿ ಅವಳಿ ನಗರದ ಜನಸಾಮಾನ್ಯರಿಗೆ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತವಾಗುತ್ತಿದ್ದು, ಶೀಘ್ರವೇ ಈ ಬಗ್ಗೆ ಗಂಭೀರತೆಯಿಂದ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂಬುದು ಆಗ್ರಹ.

ಒಟ್ಟಿನಲ್ಲಿ ಪಾಲಿಕೆಯ ಆವರಣದಲ್ಲಿಯೇ ಹಳೆಯದಾದ ಬಹುದೊಡ್ಡ ಕಟ್ಟಡ ಶಿಥಿಲಗೊಂಡಿದ್ದರೂ ಅಧಿಕಾರಿಗಳು ತಲೆ ಕೆಡಿಸಿಕೊಳ್ಳದಿರುವುದು ನಿಜಕ್ಕೂ ದುರಂತ. ಇನ್ನಾದರೂ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಮುಂದಾಗುವ ದುರಂತ ತಡೆಯಬೇಕಿದೆ.

ಮಲ್ಲೇಶ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By : Shivu K
PublicNext

PublicNext

26/11/2021 05:06 pm

Cinque Terre

42.62 K

Cinque Terre

1