ದೊಡ್ಡಬಳ್ಳಾಪುರ: ಬೆಂಗಳೂರು ಮಹಾನಗರದ ಕಸ ಬೆಂಗಳೂರು ಗ್ರಾಮೀಣರಿಗೆ ವಿಷವಾಗಿದೆ. ಬಿಬಿಎಂಪಿ, ತ್ಯಾಜ್ಯವನ್ನು ತಂದು ಭಕ್ತರಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಸುರಿಯಲಾಗುತ್ತಿದೆ. ವೈಜ್ಞಾನಿಕವಾಗಿ ಕಸ ಸಂಸ್ಕರಣೆ ಮಾಡದೆ ಪರಿಸರ ಹಾಳು ಮಾಡಲಾಗಿದೆ. ಬಿಬಿಎಂಪಿ ತ್ಯಾಜ್ಯ ಸಂಸ್ಕರಣೆ ಮಾಡುವ ಎಂಎಸ್ ಜಿಪಿ ಘಟಕವನ್ನು ಮುಚ್ಚುವಂತೆ ಒತ್ತಾಯಿಸಿ ಸ್ಥಳೀಯರು ನಾಳೆಯಿಂದ (ನ.24 ) ಅನಿರ್ದಿಷ್ಟವಧಿ ಧರಣಿಗೆ ಮುಂದಾಗಿದ್ದಾರೆ.
ಧರಣಿಗೆ ಪೂರ್ವಭಾವಿಯಾಗಿ ಸೋಮವಾರ ಭಕ್ತರಹಳ್ಳಿ ಗ್ರಾಪಂ ವ್ಯಾಪ್ತಿ ಗ್ರಾಮಸ್ಥರು ಹಾಗೂ ನವ ಬೆಂಗಳೂರು ಹೋರಾಟ ಸಮಿತಿ ಗೌರವಾಧ್ಯಕ್ಷ ಕೆ.ವಿ. ಸತ್ಯ ಪ್ರಕಾಶ್ (ಸಾರಥಿ ), ಸಂಸ್ಥಾಪಕ ಅಧ್ಯಕ್ಷ ಜಿ.ಎನ್. ಪ್ರದೀಪ್ ಮತ್ತು ಭಕ್ತರಹಳ್ಳಿ ಗ್ರಾಪಂ ಅಧ್ಯಕ್ಷ ಸಿದ್ದಲಿಂಗಯ್ಯ ಗ್ರಾಮಸ್ಥರೊಂದಿಗೆ ಭಕ್ತರಹಳ್ಳಿ ವ್ಯಾಪ್ತಿಯ ಎಂಎಸ್ ಜಿಪಿ ಘಟಕಕ್ಕೆ ಭೇಟಿ ನೀಡಿ, ಘಟಕವನ್ನು ಮುಚ್ಚುವಂತೆ ಆಗ್ರಹಿಸಿದರು.
ಈ ಕಸ ವಿಲೇವಾರಿ ಘಟಕ ಸುತ್ತಮುತ್ತಲಿನ ಹಳ್ಳಿಗಳಲ್ಲಿ ವಿಷಪೂರಿತ ನೀರು, ಗಾಳಿಯನ್ನು ಹರಡುತ್ತಿದೆ ಎಂದು ಸಾರ್ವಜನಿಕರೂ ಆಕ್ರೋಶ ವ್ಯಕ್ತಪಡಿಸಿದರು.
PublicNext
23/11/2021 08:36 pm