ನವದೆಹಲಿ : ವೇಲ್ಸ್ ನ ಬ್ರೆಕಾನ್ ನಲ್ಲಿ ನಡೆದ ಅಭ್ಯಾಸ ಶಿಬಿರದಲ್ಲಿ ಭಾರತೀಯ ಸೇನಾ ತಂಡ ಚಿನ್ನದ ಪದಕ ಗೆದಿದೆ. ಭಾರತೀಯ ಸೇನೆ ಪ್ರತಿನಿಧಿಸಿದ 4/5 ಗೂರ್ಖಾ ರೈಫಲ್ಸ್ (ಫ್ರಂಟಿಯರ್ ಫೋರ್ಸ್)ತಂಡ ಚಿನ್ನದ ಪದಕ ಗೆದ್ದುಕೊಂಡಿದೆ. ಯುಕೆ ಸೈನ್ಯ ಅಕ್ಟೋಬರ್ 13 ರಿಂದ 15ರ ವರೆಗೆ ಅಭ್ಯಾಸ ಶಿಬಿರ ಆಯೋಜಿಸಿತ್ತು. ತಂಡದ ಮನೋಭಾವ, ಸಹಿಷ್ಣುತೆ, ಸೇರಿದಂತೆ ಹಲವು ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಒಟ್ಟು 96 ತಂಡಗಳು ಈ ಅಭ್ಯಾಸ ಸ್ಪರ್ಧೆಯಲ್ಲಿ ಪಾಲ್ಗೊಂಡಿತ್ತು.
ಅತ್ಯಂತ ಕಠಿಣ ಸಂದರ್ಭದಲ್ಲಿ ಕಾರ್ಯಕ್ಷಮತೆಯನ್ನು ಪರೀಕ್ಷಿಸುವ ಈ ಸ್ಪರ್ಧೆಯಲ್ಲಿ ಭಾರತೀಯ ಸೇನಾ ತಂಡ ಚಿನ್ನದ ಪದಕ ಗೆದ್ದುಕೊಂಡಿದೆ. ಈ ಸವಾಲು ಹಾಗೂ ಪರೀಕ್ಷೆಯನ್ನು ಭಾರತೀಯ ಸೇನಾ ತಂಡ ಯಶಸ್ವಿಯಾಗಿ ಎದುರಿಸಿದೆ. ಅಕ್ಟೋಬರ್ 15 ರಂದು ನಡೆದ ಸಮಾರೋಪ ಸಮಾರಂಭದಲ್ಲಿ ಚಿನ್ನದ ಪದಕ ನೀಡಿ ಗೌರವಿಸಲಾಯಿತು.
PublicNext
16/10/2021 07:42 pm