ಹೊಸದಿಲ್ಲಿ: ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು ಎಂದು ಎಲ್ಲಿ ನಾಮಫಲಕಗಳನ್ನು ಹಾಕಿದರು ನಮ್ಮ ದೇಶ ಜನ ಮಾತ್ರ ಪಾನ್, ಗುಟ್ಕಾ ತಿಂದು ಎಲ್ಲೆಂದರಲ್ಲಿ ಉಗುಳುವುದನ್ನು ಮಾತ್ರ ನಿಲ್ಲಿಸುತ್ತಿಲ್ಲ. ಇನ್ನು ಶಾಕಿಂಗ್ ಸಂಗತಿ ಎಂದರೆ ಈ ರೀತಿ ರೈಲು ನಿಲ್ದಾಣಗಳಲ್ಲಿ ಉಗುಳಿದ ಕಲೆ ತೆಗೆಯಲು ರೈಲ್ವೆ ಇಲಾಖೆ ಪ್ರತಿ ವರ್ಷ ರೂ. 1,200 ಕೋಟಿಯಷ್ಟು ವ್ಯಯಿಸುತ್ತಿದೆ. ಇದರ ಜತೆಗೆ ಸ್ವಚ್ಛತೆಗೆ ಸಾಕಷ್ಟು ನೀರು ಕೂಡ ಬಳಕೆಯಾಗುತ್ತಿದೆ ಎಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.
ಜನರು ನಿಲ್ದಾಣಗಳಲ್ಲಿ ಉಗುಳುವುದನ್ನು ತಡೆಯಲು ರೈಲು ನಿಲ್ದಾಣಗಳಲ್ಲಿ ಪರಿಸರ ಸ್ನೇಹಿ ಸ್ಪಿಟ್ಟೂನ್ ಪೌಚ್ ಒದಗಿಸುವ ವೆಂಡಿಂಗ್ ಮಶೀನುಗಳನ್ನು ಅಳವಡಿಸಲಾಗುತ್ತಿದೆ. ಸುಮಾರು 42 ನಿಲ್ದಾಣಗಳಲ್ಲಿ ಈ ಸೌಲಭ್ಯವಿದ್ದು ಈ ಪೌಚ್ ರೂ. 5ರಿಂದ ರೂ. 10 ಕ್ಕೆ ಲಭ್ಯವಿದೆ.
ಇವುಗಳನ್ನು 15 ರಿಂದ 20 ಬಾರಿ ಬಳಸಬಹುದಾಗಿದ್ದು ಒಮ್ಮೆ ಬಿಸಾಕಿದ ನಂತರ ಅದರೊಳಗಿನ ಬೀಜಗಳಿಂದ ಗಿಡಗಳು ಬೆಳೆಯುತ್ತವೆ. ನಾಗ್ಪುರ್ ಮೂಲದ ಕಂಪೆನಿ ತಯಾರಿಸಿರುವ ಈ ಸ್ಪಿಟ್ಟೂನ್ ಒದಗಿಸುವ ಈ ಝಿಸ್ಪಿಟ್ ಯಂತ್ರಗಳನ್ನು ಹಲವೆಡೆ ಅಳವಡಿಸಲಾಗಿದೆ.
ಪ್ರಸಕ್ತ ರೈಲು ನಿಲ್ದಾಣದಲ್ಲಿ ಉಗುಳಿದರೆ ರೂ. 500 ದಂಡ ಫಿಕ್ಸ್.
PublicNext
12/10/2021 07:25 pm