ಗದಗ: ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ತವರು ಜಿಲ್ಲೆಯಲ್ಲಿಯೇ ಅವ್ಯವಸ್ಥೆ ತಲೆದೋರಿದೆ. ಲಕ್ಷ್ಮೇಶ್ವರ - ಹರದಗಟ್ಟಿ ಗ್ರಾಮದ ರಸ್ತೆಗಳಲ್ಲಿ ದೊಡ್ಡ ಗುಂಡಿಗಳು ಜನರ ಸಾವಿಗಾಗಿ ಕಾಯುತ್ತಿವೆ.
ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಹರದಗಟ್ಟಿ ಗ್ರಾಮದಿಂದ ಲಕ್ಷ್ಮೇಶ್ವರ ಪಟ್ಟಣಕ್ಕೆ ಹೋಗುವ ರಸ್ತೆ ಇದಾಗಿದ್ದು, ಲೋಕೋಪಯೋಗಿ ಸಚಿವರ ಜಿಲ್ಲೆಯಲ್ಲಿ ಇ ರೀತಿ ರಸ್ತೆಗಳಿದ್ದರೇ ಇನ್ನೂ ರಾಜ್ಯದ ರಸ್ತೆಗಳ ಪರಿಸ್ಥಿತಿ ಹೇಗೆ ಎಂಬುವುದು ಸಾರ್ವಜನಿಕರ ಯಕ್ಷ ಪ್ರಶ್ನೆಯಾಗಿದೆ.
ಹರದಗಟ್ಟಿ ಗ್ರಾಮಕ್ಕೆ ಲಕ್ಷ್ಮೇಶ್ವರ ಹೋಗಲು ಪ್ರಮುಖ ರಸ್ತೆ ಇದಾಗಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಇದೆಯೊಂದೆ ರಸ್ತೆಯಾಗಿದೆ. ಗುಂಡಿಯಲ್ಲಿ ಬಿದ್ದು ಹಲವಾರು ವಾಹನ ಸವಾರರು ಜೀವ ಕಳೆದುಕೊಂಡಿದ್ದಾರೆ. ಅಲ್ಲದೇ ಸಾರ್ವಜನಿಕರ ಸಾವಿಗಾಗಿ ರಸ್ತೆಗಳಲ್ಲಿನ ದೊಡ್ಡ ದೊಡ್ಡ ಗುಂಡಿಗಳು ಕಾಯುತ್ತಿವೆ.
ಇನ್ನೂ ಇಂತಹ ಅವ್ಯವಸ್ಥೆಯಿಂದ ವಾಹನ ಸವಾರರು ಪರದಾಡುವ ಪರಿಸ್ಥಿತಿ ಎದುರಾಗಿದೆ. ಈ ರಸ್ತೆಯಲ್ಲಿ ಮಳೆ ಬಂದರೆ ಗುಂಡಿಯಲ್ಲಿ ನೀರು ನಿಂತುಕೊಂಡು ರಸ್ತೆ ಕಾಣದಂತೆ ದ್ವಿಚಕ್ರ ವಾಹನ ಸವಾರರು ಎದ್ದು ಬಿದ್ದು ಆಸ್ಪತ್ರೆ ಸೇರುವಂತೆ ಆಗಿದೆ. ಈ ರಸ್ತೆಯಲ್ಲಿ ಸಾರ್ವಜನಿಕರು ದಿನನಿತ್ಯ ಹೋರಾಡುವಂತಾಗಿದ್ದು, ಸಚಿವರೇ ನಿಮ್ಮ ಮನೆಯ ಅಂಗಳದಲ್ಲಿಯೇ ಹೀಗಾದರೇ ಹೇಗೆ..?
ಇನ್ನೂ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನ ಹರಿಸಬೇಕಾಗಿದೆ. ಏನಾದರೂ ಅನಾಹುತ ಸಂಭವಿಸಿದರೆ ಯಾರು ಹೊಣೆಯಾಗುತ್ತಾರೆ ಎಂಬ ಪ್ರಶ್ನೆ ಹರದಗಟ್ಟಿ ಗ್ರಾಮದ ಜನರಲ್ಲಿ ಕಾಡುತ್ತಿವೆ. ಜನಪ್ರತಿನಿಧಿಗಳು, ಸಂಭಂದಿಸಿದ ಅಧಿಕಾರಿಗಳು ಇತ್ತ ಗಮನಹರಿಸಬೇಕಾಗಿದೆ.
PublicNext
12/10/2021 09:35 am