ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಾತ್ರಾರ್ಥಿಗಳ ಗಮನಕ್ಕೆ: ಈ ಮಾರ್ಗಸೂಚಿ ಪಾಲನೆ ಕಡ್ಡಾಯ

ಡೆಹ್ರಾಡೂನ್ : ಹಿಂದುಗಳ ಪವಿತ್ರ ಯಾತ್ರೆಗಳಲ್ಲಿ ಒಂದೆನಿಸಿರುವ ಚಾರ್ ಧಾಮ್ ಯಾತ್ರೆಗೆ ಹೊಸ ಮಾರ್ಗಸೂಚಿಯನ್ನು ಉತ್ತರಾಖಂಡ್ ಸರ್ಕಾರ ಪ್ರಕಟಿಸಿದೆ. ಹೊಸ ಮಾರ್ಗಸೂಚಿ : ಚಾರ್ ಧಾಮ್ ಯಾತ್ರೆ ಮಂಡಳಿ ವೆಬ್ ತಾಣದಲ್ಲಿ ನೋಂದಣಿ ಕಡ್ಡಾಯಗೊಳಿಸಲಾಗಿದೆ. ಆದರೆ, ದರ್ಶನಕ್ಕೆ ಯಾತ್ರಾ ಇ-ಪಾಸ್ ಅಗತ್ಯವಿಲ್ಲ.

* ಯಾತ್ರಾರ್ಥಿಗಳು ಸಂಪೂರ್ಣವಾಗಿ ಕೊರೊನಾ ಲಸಿಕೆ ಪಡೆದಿರಬೇಕು ಅಥವಾ ಯಾತ್ರೆಗೂ 72 ಗಂಟೆಗಳ ಮುಂಚಿತವಾಗಿ ಕೊರೊನಾ ನೆಗಟಿವ್ ಪ್ರಮಾಣ ಪತ್ರ ಹೊಂದಿರಬೇಕು.

* ಚಮೋಲಿ, ಉತ್ತರ ಕಾಶಿ ಹಾಗೂ ಪ್ರಯಾಗ್ ಜಿಲ್ಲೆಗಳಲ್ಲಿ ಕೋವಿಡ್ 19 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

* ಮುಖ್ಯ ನ್ಯಾಯಮೂರ್ತಿ ಆರ್ ಎಸ್ ಚೌಹಾನ್ ಹಾಗೂ ನ್ಯಾ. ಅಲೋಕ್ ಕುಮಾರ್ ವರ್ಮಾ ಅವರಿದ್ದ ನ್ಯಾಯಪೀಠವು ಈ ಬಗ್ಗೆ ಸ್ಪಷ್ಟ ಮಾಡಿ ನಿರ್ದೇಶನ ನೀಡಿದ್ದು, ಅದರಂತೆ ಲಸಿಕೆ ಪ್ರಮಾಣ ಪತ್ರ, ಕೊವಿಡ್ 19 ಟೆಸ್ಟ್ ವರದಿ ಕಡ್ಡಾಯ.

* ಹೆಚ್ಚಿನ ವಿವರಗಳಿಗೆ ಉತ್ತರಾಖಂಡ ಸರ್ಕಾರದ ಅಧಿಕೃತ ವೆಬ್ ತಾಣದಲ್ಲಿ ಸಂಪೂರ್ಣವಾಗಿ ಮಾರ್ಗಸೂಚಿ ವಿವರ ಪಡೆದುಕೊಳ್ಳುವಂತೆ ಚಾರ್ ಧಾಮ್ ಯಾತ್ರೆ ಮಂಡಳಿ ಕೋರಿದೆ.

* ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ಮುಂತಾದ ಕೋವಿಡ್ 19 ಮಾರ್ಗ ಸೂಚಿ ಎಲ್ಲರಿಗೂ ಅನ್ವಯವಾಗಲಿದೆ.

Edited By : Nirmala Aralikatti
PublicNext

PublicNext

07/10/2021 12:22 pm

Cinque Terre

21.32 K

Cinque Terre

0