ದೆಹಲಿ: ದೇಶದ ಹಿರಿಯ ನಾಗರಿಕರಿಗೆ ಇದು ಸಿಹಿ ಸುದ್ದಿ. ವಿಮಾನ ಪ್ರಯಾಣ ಮಾಡಬೇಕು ಎಂಬ ಆಸೆ ಎಲ್ಲರಿಗೂ ಇದ್ದೇ ಇರುತ್ತೆ. ಅಂತವರ ಆಸೆ ಈಡೇರಿಸಲು ವಿಮಾನಯಾನ ಪ್ರಾಧಿಕಾರ ಮುಂದಾಗಿದೆ.
ವಿದೇಶ ಹೊರತಾಗಿ ಭಾರತದಲ್ಲಿ ಸಂಚರಿಸುವ ಪ್ರಾಧಿಕಾರದ ವಿಮಾನದಲ್ಲಿ ಹಿರಿಯ ನಾಗರಿಕರಿಗೆ ಟಿಕೆಟ್ ದರದ ಅರ್ಧದಷ್ಟು ಮಾತ್ರ ಶುಲ್ಕ ಭರಿಸಲು ಅನುಮತಿ ದೊರೆತಿದೆ. ಏರ್ ಇಂಡಿಯಾ ವಿಮಾನದಲ್ಲಿ ಪಯಣಿಸುವವರಿಗೆ ಮಾತ್ರ ಈ ಸೌಲಭ್ಯ ಸಿಗಲಿದೆ. 60 ವರ್ಷ ವಯಸ್ಸು ಮೇಲ್ಪಟ್ಟವರಿಗೆ ಮಾತ್ರ ಈ ಸೌಲಭ್ಯ ಸಿಗಲಿದೆ. ಇದಕ್ಕಾಗಿ ಅವರು ಪ್ರಯಾಣದ ಮೂರು ದಿನ ಮುನ್ನವೇ ಮುಂಗಡ ಟಿಕೆಟ್ ಕಾದಿರಸಬೇಕಿದೆ. ಜತೆಗೆ ವಯಸ್ಸು ಸೂಚಿಸುವ ವೋಟರ್ ಐಡಿ, ಆಧಾರ್ ಕಾರ್ಡ್ ಅಥವಾ ಡಿಎಲ್ ದಾಖಲೆಯನ್ನು ಸಲ್ಲಿಸಬೇಕು ಎಂದು ಏರ್ ಇಂಡಿಯಾ ಸಂಸ್ಥೆ ತಿಳಿಸಿದೆ.
PublicNext
29/09/2021 03:58 pm