ಶ್ರೀನಗರ : ಭಾರತದ ಲಡಾಖ್ ನ ಕಾರ್ಗಿಲ್ ಜಿಲ್ಲೆಯ ಗಡಿಯಲ್ಲಿ ನಿರ್ಮಾಣವಾಗಿರುವ ಏಷ್ಯಾದ ಅತಿ ಉದ್ದದ ಝೊಜಿಲಾ ಸುರಂಗಮಾರ್ಗವನ್ನು ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಇಂದು ವೀಕ್ಷಿಸಿದರು. 30 ವರ್ಷಗಳಿಂದ ಲಡಾಖ್ ಜನರು ನಿರೀಕ್ಷಿಸಿದ್ದ ಕನಸು ಇಂದು ನನಸಾಗಿದೆ. ಹೈದರಾಬಾದ್ ಮೂಲದ ಮೇಘಾ ಎಂಜಿನಿಯರಿಂಗ್ ಕಂಪನಿಯು ಈ ಸುರಂಗ ನಿರ್ಮಾಣ ಯೋಜನೆ ಹೊಣೆ ಹೊತ್ತುಕೊಂಡಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಅತ್ಯಂತ ಮಹತ್ವದ ಎಂಜಿನಿಯರಿಂಗ್ ನಿರ್ಮಾಣ ಎನಿಸಿಕೊಂಡಿದೆ.
ಕೇಂದ್ರ ಕ್ರೀಡಾ ಮತ್ತು ಯುವಜನ ಸೇವಾ ಖಾತೆ ಸಚಿವ ಅನುರಾಗ್ ಠಾಕೂರ್ ಸೋಮವಾರ ಝೊಜಿಲಾ ಸುರಂಗ ಪರಿಶೀಲಿಸಿದ್ದು, 14.15 ಕಿ.ಮೀ ಸುರಂಗಮಾರ್ಗ ಇದಾಗಿದೆ ಎಂದಿದ್ದಾರೆ. ಶ್ರೀನಗರ- ಕಾರ್ಗಿಲ್- ಲೇಹ್ ಸಂಪರ್ಕ ಬೆಸೆಯುವಲ್ಲಿ ಈ ಸುರಂಗಮಾರ್ಗ ಮಹತ್ವದ ಪಾತ್ರ ನಿಭಾಯಿಸಲಿದ್ದು, ವಿಶ್ವದ ಅತಿ ಅಪಾಯಕಾರಿ ರಸ್ತೆಗಳಲ್ಲಿ ಇದೂ ಒಂದಾಗಿದೆ. ಈ ರಸ್ತೆಯಲ್ಲಿ ಸಂಚರಿಸುವುದು ಬಹುದೊಡ್ಡ ಸವಾಲಾಗಿದ್ದು, ಚೀನಾ ಮತ್ತು ಪಾಕಿಸ್ತಾನ ಗಡಿಯ ಸನಿಹದಲ್ಲಿ ಈ ಸುರಂಗಮಾರ್ಗವಿದೆ. ದೇಶದ ಭದ್ರತೆ ದೃಷ್ಟಿಯಿಂದ ತುಂಬಾ ಪ್ರಾಮುಖ್ಯತೆ ಪಡೆದಿದೆ.
PublicNext
28/09/2021 08:11 pm