ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಇಂದಿನಿಂದ ರಾತ್ರಿ 10 ಗಂಟೆವರೆಗೆ ಮೆಟ್ರೋ ಸಂಚಾರ

ಬೆಂಗಳೂರು : ಸಿಲಿಕಾನ್ ಸಿಟಿ ಜನರಿಗೆ ಸಿಹಿಸುದ್ದಿಯೊಂದು ಸಿಕ್ಕಿದ್ದು, ಇಂದಿನಿಂದ ನಮ್ಮ ಮೆಟ್ರೋ ಸಂಚಾರ ರಾತ್ರಿ 10 ಗಂಟೆಯವರೆಗೆ ವಿಸ್ತರಣೆ ಮಾಡಿ ಬಿಎಂಆರ್ಸಿ ಆದೇಶಿಸಿದೆ.

ಈ ಕುರಿತಂತೆ ಬಿಎಂಆರ್ ಸಿ ಎಲ್ ಆದೇಶ ಹೊರಡಿಸಿದ್ದು, ನಗರದಲ್ಲಿ ಮೆಟ್ರೋ ರೈಲು ಸಂಚಾರ ಸೇವೆಯು ಸೆಪ್ಟೆಂಬರ್ 18ರ ಶನಿವಾರದಿಂದ ರಾತ್ರಿ 10ರವರೆಗೆ ಇರಲಿದೆ ಎಂಬುದಾಗಿ ತಿಳಿಸಿದೆ. ಅಂದಹಾಗೇ ಮೆಜೆಸ್ಟಿಕ್ ನ ಕೆಂಪೇಗೌಡ ಮೆಟ್ರೋ ನಿಲ್ದಾಣ, ಬೈಯಪ್ಪನಹಳ್ಳಿ, ಕೆಂಗೇರಿ, ನಾಗಸಂದ್ರ ಮತ್ತು ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣಗಳಿಂದ ರಾತ್ರಿ 9.30ಕ್ಕೆ ಕೊನೆಯ ಮೆಟ್ರೋ ರೈಲು ಹೊರಡಲಿದೆ.

Edited By : Nagaraj Tulugeri
PublicNext

PublicNext

18/09/2021 08:07 am

Cinque Terre

58.73 K

Cinque Terre

0

ಸಂಬಂಧಿತ ಸುದ್ದಿ