ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಾರ್ಚ್ ತಿಂಗಳಲ್ಲಿ ಬ್ಯಾಂಕ್ ಗಳಿಗೆ ಸಾಲು ಸಾಲು ರಜೆ

ಬೆಂಗಳೂರು: ಮಾರ್ಚ್ ತಿಂಗಳಲ್ಲಿ ಬ್ಯಾಂಕ್ ಗಳಿಗೆ ಒಟ್ಟು 11 ರಜೆಗಳಿರಲಿವೆ ಎಂದು ರಿಸರ್ವ್ ಬ್ಯಾಂಕ್ ಮಾರ್ಚ್ ತಿಂಗಳ ಬ್ಯಾಂಕ್ ಗಳ ರಜಾ ಪಟ್ಟಿ ಬಿಡುಗಡೆಯಾಗಿದೆ.

ದೇಶಾದ್ಯಂತ ಒಟ್ಟು 11 ದಿನಗಳ ರಜೆ ಬ್ಯಾಂಕ್ ಗಳಿಗೆ ಇರಲಿದೆ.ಇವುಗಳು ಶನಿವಾರ, ಭಾನುವಾರಗಳನ್ನು ಒಳಗೊಂಡಿವೆ.

ಆದರೆ ಬ್ಯಾಂಕ್ ಗಳ ರಜೆಗಳು ಎಲ್ಲಾ ರಾಜ್ಯಗಳಿಗೂ ಒಂದೇ ತೆರನಾಗಿ ಇರುವುದಿಲ್ಲ. ಹಬ್ಬದ ವಿಷಯಕ್ಕೆ ಬಂದಾಗ ಆಯಾ ರಾಜ್ಯಗಳಲ್ಲಿ ಬೇರೆ ಬೇರೆ ರೀತಿಯ ರಜೆಗಳು ಇರಲಿವೆ.

ಇನ್ನು, ಕರ್ನಾಟಕದ್ದು ಮಾತ್ರ ಹೇಳುವುದಾದರೆ,

ಮಾರ್ಚ್ 7: ಭಾನುವಾರ

ಮಾರ್ಚ್ 11 (ಗುರುವಾರ): ಮಹಾಶಿವರಾತ್ರಿ

ಮಾರ್ಚ್ 13: ಎರಡನೇ ಶನಿವಾರ

ಮಾರ್ಚ್ 14: ಭಾನುವಾರ

ಮಾರ್ಚ್ 21: ಭಾನುವಾರ

ಮಾರ್ಚ್ 27: ನಾಲ್ಕನೇ ಶನಿವಾರ

ಮಾರ್ಚ್ 28: ಭಾನುವಾರ

ಮಾರ್ಚ್ 30 (ಸೋಮವಾರ): ಹೋಳಿ

ಇದರ ಜತೆಗೆ ಕೇಂದ್ರ ಸರ್ಕಾರದ ಬ್ಯಾಂಕ್ ಖಾಸಗೀಕರಣವನ್ನ ವಿರೋಧಿಸಿ ಅನೇಕ ಬ್ಯಾಂಕ್ ಒಕ್ಕೂಟಗಳು ಮುಷ್ಕರಕ್ಕೆ ಕರೆ ನೀಡಿದ್ದು, ಹಾಗೇನಾದರೂ ಆದಲ್ಲಿ, ಇನ್ನೂ ಕೆಲವು ದಿನಗಳು ಬ್ಯಾಂಕ್ ಗಳು ಕಾರ್ಯನಿರ್ವಹಿಸಲಾರವು.

ಬ್ಯಾಂಕ್ ಒಕ್ಕೂಟಗಳು ಮಾರ್ಚ್ 10ರಂದು ದೆಹಲಿ ಸಂಸತ್ತಿನತ್ತ ಮೆರವಣಿಗೆ ನಡೆಸಲು ಯೋಜನೆ ರೂಪಿಸಿವೆ. ಇದೊಮ್ಮೆ ನಡೆದರೆ ಅನಿರ್ದಿಷ್ಟಾವಧಿಯವರೆಗೆ ಬ್ಯಾಂಕ್ ಗಳು ಬಂದ್ ಆಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

Edited By : Nirmala Aralikatti
PublicNext

PublicNext

26/02/2021 03:06 pm

Cinque Terre

28.13 K

Cinque Terre

0

ಸಂಬಂಧಿತ ಸುದ್ದಿ