ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಪಾಸ್ಟ್ ಟ್ಯಾಗ್ ಕಡ್ಡಾಯ ನೆಪ- ಚಾಲಕದಿಂದ ದುಪ್ಪಟ್ಟು ಹಣ ವಸೂಲಿ

ಬೆಳಗಾವಿ: ಹೈ ವಾಹನಗಳಿಗೆ ಟೋಲ್ ಫೀ ಬರಿಸಲು ಆನ್‌ಲೈನ್ ಪಾಸ್ಟ್‌ಟ್ಯಾಗ್ ಕಡ್ಡಾಯ ಹಿನ್ನೆಲೆ ಬೆಳಗಾವಿ ಹಿರೇಬಾಗೆವಾಡಿ ಬಳಿ ಇರುವ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ-೪ ಟೋಲ್ ಗೇಟ್ ಬಳಿ ಸಾಕಷ್ಟು ಟ್ರ್ಯಾಜಿಡಿ ಸನ್ನಿವೇಶಗಳಿಗೆ ಮಂಗಳವಾರ ಸಾಕ್ಷಿಯಾಗಿದೆ.

ಬೆಳಗಾವಿಯಲ್ಲಿ ಇಂದು ಮುಂಜಾನೆಯಿಂದಲೇ ಟೋಲ್ ಗೇಟ್‌ನಲ್ಲಿ, ಪಾಸ್ಟ್ ಟ್ಯಾಗ್ ಕಡ್ಡಾಯ ನೆಪದಲ್ಲಿ ವಾಹನ ಚಾಲಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿರುವುದರಿಂದ ಚಾಲಕರು ಆಕ್ರೋಶ ವ್ಯಕ್ತಪಡಿಸಿದರು. ಮ್ಯಾಕ್ಸಿ ಕ್ಯಾಬ್ ಚಾಲಕ ಆಕ್ರೋಶ ಹೇಗೆತ್ತು ಎಂದ್ರೆ, ಟೋಲ್ ಸಿಬ್ಬಂದಿಯಿಂದ ದುಪ್ಪಟ್ಟು ಹಣ ವಸೂಲಿ ಹಿನ್ನೆಲೆ ಹತಾಶನಾದ. ಬಳಿಕ ಪ್ರಯಾಣಿಕರಿಂದ ಪಡೆದಿದ್ದ ಹಣವನ್ನು ಕೂಡ ವಾಪಸ್ ಕೊಟ್ಟು ವಾಹನವನ್ನು ಮತ್ತೆ ಧಾರವಾಡದಕ್ಕೆ ತೆರಳಿದ.

ಟೋಲ್ ಗೇಟ್‌ನಿಂದ ಹಿರೇಬಾಗೇವಾಡಿಗೆ ನಡೆದುಕೊಂಡು ಹೋದ ಪ್ಯಾಸೆಂಜರ್ ಇದೇ ವೇಳೆ ಟೋಲ್ ಸಿಬ್ಬಂದಿ ವಿರುದ್ಧ ಪ್ಯಾಸೆಂಜರ್ ಮತ್ತು ಡ್ರೈವರ್ ಆಕ್ರೋಶ ವ್ಯಕ್ತಪಡಿಸಿದರು. ಈ ಹಿಂದೆ 140 ರೂಪಾಯಿ ಟೋಲ್ ಕೊಡ್ತಿದ್ದೆ, ಈಗ 310 ರೂಪಾಯಿ ತೆಗೆದುಕೊಳ್ಳುತ್ತಿದ್ದಾರೆ.

ಏಕಾಏಕಿ ದುಪ್ಪಟ್ಟು ಹಣ ಪಡೆದರೆ ನಾವು ಎಲ್ಲಿಗೆ ಹೋಗಬೇಕು? ಒಂದು ಕಡೆ ಹೋಗಲು 310 ರೂ. ಕೋಟ್ಟರೆ ನಮಗೆ ಲಾಭ ಏನೂ ಉಳಿಯುವುದಿಲ್ಲ ಮತ್ತು ಡಿಸೇಲ್ ಕೂಡ ದುಬಾರಿಯಾಗಿದ್ದು ಇದೀಗ ಟೋಲ್ ಹಣ ಕೂಡ ದುಬಾರಿಯಾದರೆ ಏನೂ ಮಾಡುವುದು ಅಂತ ಡ್ರೈವರ್ ಆಕ್ರೋಶ ಹೊರಹಾಕಿದ.

ಚಾಲಕ ಅನಿವಾರ್ಯವಾಗಿ ಪ್ರಯಾಣಿಕರನ್ನ ಟೋಲ್ ಗೇಟ್ ಬಳಿ ನಿಲ್ಲಿಸಿ‌ ವಾಹನ ಸಮೇತ ವಾಪಸ್ ಆಗುವಂತ ಪರಿಸ್ಥಿತಿ ಉಂಟಾಯಿತು. ಪ್ರಯಾಣಿಕರು ಅನಿವಾರ್ಯವಾಗಿ ಟೋಲ್ ಗೇಟ್ ಬಳಿಯಿಂದ ೨ ಕಿಮೀ ಹೀರೇಬಾಗೆವಾಡಿವರಿಗೂ ನಡೆದು ಬಸ್‌ಗಳ ಪ್ರಯಾಣ ಮಾಡಬೇಕಾಯಿತು.

ಇನ್ನು ಮದುವೆಗೆ ಹೋಗಬೇಕಿದ್ದ ಬಸ್‌ವೊಂದರ ಚಾಲಕ ದುಪ್ಪಟ್ಟು ಹಣ ನೀಡುವ ಬದಲು ಒಂದು ಗಂಟೆಗಳ ಕಾಲ ಸರದಿ ಸಾಲಿನಲ್ಲಿ ನಿಂತು ಪಾಸ್ಟ್ ಟ್ಯಾಗ್ ರೀಚಾರ್ಜ್ ಮಾಡಿಸುವಂತ ಪರಿಸ್ಥಿತಿಯೂ ಕೂಡ ಕಂಡು ಬಂತು. ಇದೇ ವೇಳೆ ವಾಹನಗಳ ಚಾಲಕರು ಸೇರಿದಂತೆ ಪ್ರಯಾಣಿಕರಿಗೆ ಸಹಿಸಿಕೊಳ್ಳಲಾರದ ಕಿರಿ ಕಿರಿ ಅನುಭವದಿಂದಾಗಿ ಟೋಲ್ ಸಿಬ್ಬಂದಿಗೆ ಹಿಡಿ ಶಾಪ್ ಹಾಕಿದರು.

Edited By : Manjunath H D
PublicNext

PublicNext

16/02/2021 10:35 pm

Cinque Terre

69.44 K

Cinque Terre

7