ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಾಕ್ , ಚೀನಾದಿಂದ ಭಾರತಕ್ಕೆ ಬೆದರಿಕೆ : ಪರಿಸ್ಥಿತಿ ಎದುರಿಸಲು ನಾವು ಸಜ್ಜು ಎಂದ ಸೇನಾ ಮುಖ್ಯಸ್ಥ ನರವಣೆ

ನವದೆಹಲಿ: ದೇಶದ ಒಳಗಡೆ ಸಾಂಕ್ರಾಮಿಕ ರೋಗದ ಭೀತಿ,ಗಡಿಯಲ್ಲಿ ಪರದೇಶಗಳ ಕಿರಿಕಿರಿ ಮುಂದುವರೆದಿದೆ.

ಸದ್ಯ ಉತ್ತರದ ಗಡಿಭಾಗಗಳಲ್ಲಿ ತೀವ್ರ ಕಟ್ಟೆಚ್ಚರದ ಬಗ್ಗೆ ನಿಗಾವಹಿಸಲಾಗುತ್ತಿದೆ.

ಚೀನಾದೊಂದಿಗೆ ಗಡಿ ಸಮಸ್ಯೆಗೆ ಶಾಶ್ವತ ಶಾಂತಿಯುತ ಪರಿಹಾರವನ್ನು ಕಂಡುಕೊಳ್ಳಲು ನಾವು ಪ್ರಯತ್ನಿಸುತ್ತಿದ್ದೇವೆ ಆದರೆ ಯಾವುದೇ ಸಂಭವನೀಯ ಪರಿಸ್ಥಿತಿಗಳನ್ನು ಎದುರಿಸಲು ಸಜ್ಜಾಗಿದ್ದೇವೆ ಎಂದು ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಣೆ ಹೇಳಿದ್ದಾರೆ.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪಾಕಿಸ್ತಾನ ಮತ್ತು ಚೀನಾ ಒಟ್ಟಾಗಿ ಪ್ರಬಲ ಬೆದರಿಕೆಯನ್ನು ನಮ್ಮ ವಿರುದ್ಧ ರೂಪಿಸುತ್ತಿದ್ದು, ಈ ಸಹಭಾಗಿತ್ವದ ಬೆದರಿಕೆಯನ್ನು ದೂರವಿಡಲು ಸಾಧ್ಯವಿಲ್ಲ.

ಪಾಕಿಸ್ತಾನ ಭಯೋತ್ಪಾದನೆಯನ್ನು ಪ್ರೋತ್ಸಾಹಿಸುತ್ತಲೇ ಬಂದಿದೆ. ಭಯೋತ್ಪಾದನೆ ವಿರುದ್ಧ ಭಾರತ ಶೂನ್ಯ ಸಹಿಷ್ಣುತೆಯನ್ನು ಹೊಂದಿದೆ. ಸಮಯ, ಸಂದರ್ಭಗಳಲ್ಲಿ ನಿಖರವಾಗಿ ಪ್ರತ್ಯುತ್ತರ ನೀಡುವ ಹಕ್ಕನ್ನು ನಾವು ಹೊಂದಿದ್ದೇವೆ ಎಂದರು.

‘ಭದ್ರತೆಯ ವಿಚಾರದಲ್ಲಿ ಚೀನಾ ಪೂರ್ವ ಲಡಾಖ್ ನಲ್ಲಿನ ವಾಸ್ತವ ಗಡಿ ನಿಯಂತ್ರಣ ರೇಖೆ ಉದ್ದಕ್ಕೂ ನಿಯೋಜಿಸಿರುವ ಸೇನಾ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ವಿಚಾರದಲ್ಲಿ ಒಂದು ಒಪ್ಪಂದಕ್ಕೆ ಬರುವ ವಿಶ್ವಾಸವಿದೆ‘ ಎಂದರು.

ರಾಷ್ಟ್ರೀಯ ಹಿತಾಸಕ್ತಿ ಮತ್ತು ಗುರಿಯ ಆಧಾರದ ಮೇಲೆ ಪೂರ್ವ ಲಡಾಖ್ ನಲ್ಲಿ ಸೇನೆಯನ್ನು ನಿಯೋಜಿಸಲಾಗುತ್ತದೆ ಎಂದು ಹೇಳಿದರು.

Edited By : Nirmala Aralikatti
PublicNext

PublicNext

12/01/2021 02:47 pm

Cinque Terre

42.29 K

Cinque Terre

2

ಸಂಬಂಧಿತ ಸುದ್ದಿ