ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು ಏರ್ ಪೋರ್ಟ್ ಗೆ ರೈಲು ಸೇವೆ ಆರಂಭ : ಟಿಕೆಟ್ ದರ ಕೇವಲ 10 ರೂ..

ಬೆಂಗಳೂರು: ಕೆಎಸ್ ಆರ್ ಬೆಂಗಳೂರು ಟು ದೇವನಹಳ್ಳಿಗೆ ಡೆಮೋ ರೈಲು ಸೇವೆ ಆರಂಭವಾಗಿದೆ.

ಕೇಂದ್ರ ರೈಲ್ವೆ ನಿಲ್ದಾಣದಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಪ್ರಥಮ ಉಪನಗರ ರೈಲು ಹೊರಟಿದೆ.

ಈ ಮೂಲಕ 10 ರೂಪಾಯಿ ನೀಡಿ ಟಿಕೆಟ್ ಪಡೆದು ರೈಲಿನಿಂದ ಏರ್ಪೋರ್ಟ್ ಗೆ ಪಯಣ ಮಾಡಬಹುದಾಗಿದೆ.

ಬೆಳಗ್ಗಿನ ಜಾವ 4.45ಕ್ಕೆ ಏರ್ ಪೋರ್ಟ್ ನತ್ತ ಒಂದು ರೈಲು ಹೊರಟಿದೆ. ಡೆಮೋ ರೈಲಿನಲ್ಲಿ ಸಂಸದ ಪಿ.ಸಿ ಮೋಹನ್ ಅವರು ರೈಲ್ವೆ ಅಧಿಕಾರಗಳ ಜೊತೆ ರೈಲಿನಲ್ಲಿ ಪ್ರಯಾಣ ಬೆಳೆಸಿದರು.

ವಿಮಾನ ನಿಲ್ದಾಣಕ್ಕೆ 2 ಕಿ.ಮೀ ದೂರದಲ್ಲಿ ಹಾಲ್ಟ್ ಸ್ಟೇಷನ್ ಇದೆ.

ಇನ್ನು ದೇವನಹಳ್ಳಿ ರೈಲು ನಿಲ್ದಾಣದಿಂದ ಉಚಿತ ಬಸ್ ವ್ಯವಸ್ಥೆ ಇದ್ದು, ರೈಲಿನಲ್ಲಿ ಪ್ರಯಾಣ ಮಾಡಿ ದೇವನಹಳ್ಳಿ ವಿಮಾನ ನಿಲ್ದಾಣದತ್ತ ಪ್ರಯಾಣಿಕರು ತೆರಳಿದ್ದಾರೆ.

ದೇವನಹಳ್ಳಿ ರೈಲ್ವೆ ನಿಲ್ದಾಣದಿಂದ ಎರಡು ಕಿಲೋಮೀಟರ್ ದೂರದಲ್ಲಿ ಏರ್ ಪೋರ್ಟ್ ಇದೆ. ರೈಲ್ವೆ ನಿಲ್ದಾಣದಿಂದ ನೇರವಾಗಿ ವಿಮಾನ ಟರ್ಮಿನಲ್ ಕಡೆ ಬಸ್ ಸಂಚಾರ ವ್ಯವಸ್ಥೆ ಕೂಡ ಇದ್ದು, ಪ್ರಯಾಣಿಕರಿಗೆ ಅನುಕೂಲಕರವಾಗಲಿದೆ.

Edited By : Nirmala Aralikatti
PublicNext

PublicNext

04/01/2021 01:56 pm

Cinque Terre

27.82 K

Cinque Terre

3

ಸಂಬಂಧಿತ ಸುದ್ದಿ