ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸ ವರ್ಷಕ್ಕೆ 'ಜಿಯೋ'ಮಯ: ಎಲ್ಲ ಕರೆಗಳು ಉಚಿತ

ನವದೆಹಲಿ: ರಿಲಯನ್ಸ್‌ ಜಿಯೊ ನೆಟ್‌ವರ್ಕ್‌ನಿಂದ ದೇಶದಲ್ಲಿ ಯಾವುದೇ ನೆಟ್‌ವರ್ಕ್‌ಗಳಿಗೆ ಹೊಸ ವರ್ಷದಿಂದ ಎಲ್ಲ ಕರೆಗಳು ಉಚಿತವಾಗಿ ಲಭ್ಯವಾಗಲಿದೆ ಎಂದು ಜಿಯೊ ಗುರುವಾರ ಪ್ರಕಟಿಸಿದೆ.

ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ ನಿರ್ದೇಶನಗಳ ಪ್ರಕಾರದಂತೆ 2021ರ ಜನವರಿ 1ರಿಂದ ಹೊಸ ಕ್ರಮಗಳನ್ನು ಜಿಯೊ ಅನುಷ್ಠಾನಗೊಳಿಸುತ್ತಿದ್ದು, ಎಲ್ಲ ದೇಶೀಯ ಧ್ವನಿ ಕರೆಗಳ ಮೇಲಿನ ಮೊಬೈಲ್‌ ನೆಟ್‌ವರ್ಕ್‌ ಅಂತರ್‌ ಸಂಪರ್ಕ ಬಳಕೆ ಶುಲ್ಕವನ್ನು( ಐಯುಸಿ) ಕೊನೆಗೊಳಿಸಲಾಗುತ್ತಿದೆ.

ಐಯುಸಿ ಕ್ರಮಗಳ ಅನುಸಾರ ಜನವರಿ 1ರಿಂದ ಜಿಯೊ ನೆಟ್‌ವರ್ಕ್‌ನಿಂದ ದೇಶದಲ್ಲಿ ಯಾವುದೇ ನೆಟ್‌ವರ್ಕ್‌ಗೆ ಮಾಡುವ ವಾಯ್ಸ್‌ ಕಾಲ್‌ಗಳಿಗೆ ಶುಲ್ಕ ಇರುವುದಿಲ್ಲ.

ಈ ಹಿಂದಿನಿಂದಲೂ 'ಜಿಯೊದಿಂದ ಜಿಯೊ' ನೆಟ್‌ವರ್ಕ್‌ಗಳಿಗೆ ಎಲ್ಲ ಕರೆಗಳು ಉಚಿತವಾಗಿ ಸಿಗುತ್ತಿದ್ದು, 2021ರ ಜನವರಿ 1ರಿಂದ ಜಿಯೊದಿಂದ ಇತರೆ ನೆಟ್‌ವರ್ಕ್‌ಗಳಿಗೆ (ಆಫ್‌–ನೆಟ್‌) ಮಾಡುವ ಕರೆಗಳಿಗೂ ಶುಲ್ಕ ವಿಧಿಸುವುದಿಲ್ಲ.

ಕಳೆದ ಒಂದು ವರ್ಷದಿಂದ ರಿಲಯನ್ಸ್‌ ಜಿಯೊದಿಂದ ಇತರೆ ನೆಟ್‌ವರ್ಕ್‌ಗಳಿಗೆ ಮಾಡುವ ಕರೆಗೆ ಪ್ರತಿ ನಿಮಿಷಕ್ಕೆ 6 ಪೈಸೆ ಶುಲ್ಕ ವಿಧಿಸುತ್ತಿದೆ. ದೇಶದ ಇತರೆ ನೆಟ್‌ವರ್ಕ್‌ಗಳು ಬೇರೆ ಎಲ್ಲ ನೆಟ್‌ವರ್ಕ್‌ಗಳಿಗೂ ಉಚಿತವಾಗಿಯೇ ಕರೆ ಸೌಲಭ್ಯ ನೀಡುತ್ತಿವೆ. ಆದರೆ, ಗ್ರಾಹಕರು ಜಿಯೊಗೆ ಪಾವತಿಸುವ ಹಣಕ್ಕೆ ತಕ್ಕಷ್ಟು ಡೇಟಾ ನೀಡುವ ಮೂಲಕ ಪೈಪೋಟಿ ನೀಡುತ್ತಿದೆ.

Edited By : Nagaraj Tulugeri
PublicNext

PublicNext

31/12/2020 03:29 pm

Cinque Terre

85.28 K

Cinque Terre

16

ಸಂಬಂಧಿತ ಸುದ್ದಿ