ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ: ಭಟ್ಕಳಕ್ಕೆ ಕೇಂದ್ರ ತಂಡ ಭೇಟಿ; ನೆರೆ ಹಾವಳಿಯಿಂದುಂಟಾದ ಹಾನಿಗಳ ಪರಿಶೀಲನೆ

ಕಾರವಾರ: ಭಟ್ಕಳ ತಾಲೂಕಿನ ವಿವಿಧೆಡೆ ನೆರೆ ಹಾವಳಿಯಿಂದ ಹಾನಿಯಾದ ಪ್ರದೇಶಗಳಿಗೆ ಅಂತರ-ಸಚಿವಾಲಯದ ಕೇಂದ್ರ ತಂಡ (Inter-Ministerial Central Team) ಭೇಟಿ ನೀಡಿ ಪರಿಶೀಲನೆ ನಡೆಸಿತು.

ಉಡುಪಿಯಿಂದ ಭಟ್ಕಳಕ್ಕೆ ಆಗಮಿಸಿದ ತಂಡ, ತಾಲೂಕಿನ ಮುಟ್ಟಳ್ಳಿಯಲ್ಲಿ ಮನೆಯ ಮೇಲೆ ಗುಡ್ಡ ಕುಸಿದು ನಾಲ್ವರು ಸಾವನ್ನಪ್ಪಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಬಳಿಕ ಅಲ್ಲಿಂದ ರೈಲ್ವೆ ನಿಲ್ದಾಣ ಸಮೀಪದಲ್ಲಿರುವ ರಸ್ತೆ ಕಡಿತಗೊಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಅಲ್ಲಿಂದ ಚೌಥನಿ, ಹನಿಫಾಬಾದ್ ಶಾಲೆ ಕಟ್ಟಡ ಕುಸಿದ ಸ್ಥಳ, ಕಟಗಾರಕ್ಕೊಪ್ಪದಲ್ಲಿ ಬ್ರಿಡ್ಜ್ ಕುಸಿದ ಸ್ಥಳ ಹಾಗೂ ಹೆಗ್ಗದ್ದೆಯಲ್ಲಿ ಗುಡ್ಡ ಕುಸಿದ ಸ್ಥಳಕ್ಕೆ ಭೇಟಿ ನೀಡಿ ನಷ್ಟದ ವಿವರಗಳನ್ನು ಪಡೆದರು.

ಕೇಂದ್ರದಿಂದ ಒಟ್ಟು 7 ಜನರ ತಂಡವನ್ನು ನೆರೆ ಹಾವಳಿಯ ನಷ್ಟ ಪರಿಶೀಲನೆಗೆ ಕರ್ನಾಟಕ ರಾಜ್ಯಕ್ಕೆ ಕಳುಹಿಸಲಾಗಿದೆ. ಅದರಲ್ಲಿ ಮೂವರು ಅಧಿಕಾರಿಗಳ ಒಂದು ತಂಡ ಇಂದು ಭಟ್ಕಳಕ್ಕೆ ಭೇಟಿ ನೀಡಿದೆ. ಈ ತಂಡದಲ್ಲಿ ಆಶಿಶ್, ಮಹೇಶ ಹಾಗೂ ಭವ್ಯ ಪರಿಶೀಲನೆಗೆ ಇದ್ದಾರೆ.

ಈ ಸಂದರ್ಭದಲ್ಲಿ ಕೇಂದ್ರ ತಂಡಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಉಪವಿಭಾಗಾಧಿಕಾರಿ ಮಮತಾ ದೇವಿ ಜಿ.ಎಸ್., ತಹಶೀಲ್ದಾರ್ ಸುಮಂತ ಬಿ. ಹಾಗೂ ಇತರ ಅಧಿಕಾರಿಗಳು ಜೊತೆಗಿದ್ದು ಮಾಹಿತಿಯನ್ನು ಒದಗಿಸಿದರು.

Edited By :
PublicNext

PublicNext

08/09/2022 09:46 pm

Cinque Terre

48.73 K

Cinque Terre

0

ಸಂಬಂಧಿತ ಸುದ್ದಿ