ಗದಗ: ಜಿಲ್ಲೆ ಶಿರಹಟ್ಟಿ ತಾಲೂಕಿನ ಕಡಕೋಳ ಗ್ರಾಮದ ಬಳಿರುವ ಕಪ್ಪತ್ತಗುಡ್ಡವೂ ಮಳೆಯ ಅಬ್ಬರಕ್ಕೆ ಕುಸಿದಿದೆ. ಕುಸಿತ ಹಿನ್ನೆಲೆಯಲ್ಲಿ ಗುಡ್ಡದಲ್ಲಿ ಬಿಳಿ ಬಣ್ಣದ ಆಯಿಲ್ ಮಿಶ್ರಿತ ನೀರು ಪತ್ತೆಯಾಗಿದೆ.
ಸತತವಾಗಿ ಸುರಿಯುತ್ತಿರುವ ಮಳೆಯಿಂದ ಗುಡ್ಡವು ಕುಸಿದು ಹೋಗಿದ್ದು, ಹಲವು ವರ್ಷಗಳ ಹಿಂದೆ ಗೋಲ್ಡ್ ಮೈನಿಂಗ್ ನಿಂದ ಗುಡ್ಡ ಕುಸಿದಿದೆ ಎನ್ನುತ್ತಿದ್ದಾರೆ ಸ್ಥಳೀಯರು. ಬಿಳಿ ಬಣ್ಣದ ನೊರೆ ತೆರನಾದ ನೀರು ಮಿಶ್ರಣ ಬರುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ . ಇನ್ನೂ ಗೋಲ್ಡ್ ಮೈನಿಂಗ್ ಬಳಸಿದ ಕೆಮಿಕಲ್ ಇರುವ ಶಂಕೆಯೂ ಇದ್ದು, ಸುತ್ತಮುತ್ತಲಿನಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದ ರೈತರ ಜಮೀನು ಇದೆ. ಇದರಿಂದ ರೈತರು ಆತಂಕದಲ್ಲಿ ಇದ್ದಾರೆ ಇನ್ನೊಂದು ಬಾರಿ ಮಳೆ ಸುರಿದರೆ ರೈತರ ಜಮೀನುಗಳಲ್ಲಿ ಮಳೆಯ ನೀರು ನುಗ್ಗುವ ಸಾಧ್ಯತೆ ಹೆಚ್ಚಾಗಿದೆ.
PublicNext
05/09/2022 12:16 pm