ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ನಡುಗಡ್ಡೆಯಾದ ಕುರುವಿನಕೊಪ್ಪ ಗ್ರಾಮ ಜನರಲ್ಲಿ ಆತಂಕ!

ಗದಗ: ಜಿಯಲ್ಲೆ ರೋಣ ತಾಲೂಕಿನ ಕುರುವಿನಕೊಪ್ಪ ಗ್ರಾಮವೂ ನಡುಗಡ್ಡೆಯಾಗಿ ಕಾಣುತ್ತಿದೆ. ಮಲಪ್ರಭಾ ಹಾಗೂ ಬೆಣ್ಣೆ ಹಳ್ಳ ಪ್ರವಾಹ ಹಿನ್ನೆಲೆಯಲ್ಲಿ ಗ್ರಾಮವು ನಡುಗಡ್ಡೆಯಾಗಿ ಕಾಣುತ್ತಿದೆ. ಕುರುವಿನಕೊಪ್ಪ ಗ್ರಾಮಕ್ಕೆ ಬೆಣ್ಣೆ ಹಳ್ಳ ಹಾಗೂ ಮಲಪ್ರಭಾ ಪ್ರವಾಹದಿಂದ ನೀರು ಸುತ್ತುವರೆದಿದೆ ಗ್ರಾಮದಲ್ಲಿ ನೂರಕ್ಕೆ ಹೆಚ್ಚು ಜನರು ವಾಸ ಮಾಡುತ್ತಿದ್ದಾರೆ‌ ಗ್ರಾಮಸ್ಥರಿಗೆ ಪ್ರವಾಹದ ಭೀತಿ ಉಂಟಾಗಿದೆ ಇನ್ನೂ ಜಾನುವಾರು ಸಮೇತ ವಾಸವಿರುವ ಜನರಿಗೆ ಈಗ ಆತಂಕಕ್ಕೆ ಒಳಗಾಗಿದ್ದಾರೆ.

ನವಿಲು ತೀರ್ಥ ಡ್ಯಾಂ ನಿಂದ ಮಲಪ್ರಭಾ ನದಿಗೆ 7ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ದಾರೆ. ಇದರಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ ಗ್ರಾಮದಿಂದ ಹೊರಗಡೆ ಬರುವ ಸೇತುವೆಯೂ ಮುಳಗಡೆಯಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮತ್ತಷ್ಟು ಹೆಚ್ಚಾಗಿದೆ.

Edited By : Nagesh Gaonkar
PublicNext

PublicNext

03/09/2022 04:27 pm

Cinque Terre

28.13 K

Cinque Terre

0