ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ತುಂಬಿ ಹರಿಯೋ ಹಳ್ಳದಾಟಲು ವಿದ್ಯಾರ್ಥಿ-ಶಿಕ್ಷಕರ ಹರಸಾಹಸ!

ಗದಗ: ಸತತವಾಗಿ ಸುರಿಯುತ್ತಿರುವ ಮಳೆಯಿಂದ ಹಳ್ಳವು ತುಂಬಿ ಹರಿಯುತ್ತಿದ್ದು,ವಿದ್ಯಾರ್ಥಿಗಳು ತಮ್ಮ ಜೀವದ ಹಂಗು ತೊರೆದು ಶಾಲೆಗಳಿಗೆ ತೆರಳುತ್ತಿದ್ದಾರೆ. ಶಿಕ್ಷಕರು ಈ ವಿದ್ಯಾರ್ಥಿಗಳು ಹಳ್ಳದಾಟೋಕೆ ನೆರವಾಗುತ್ತಿದ್ದಾರೆ. ಈ ಒಂದು ಘಟನೆ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಬನ್ನಿಕೊಪ್ಪ ಗ್ರಾಮದಲ್ಲಿ ನಡೆದಿದೆ.

ಸತತವಾಗಿ ಸುರಿಯುತ್ತಿರುವ ಮಳೆಯಿಂದ ವಿದ್ಯಾರ್ಥಿಗಳನ್ನು ಶಿಕ್ಷಕರೇ ಹರಿಯುತ್ತಿರುವ ಹಳ್ಳವನ್ನು ದಾಟಿಸಲು ಹರಸಹಾಸ ಪಡುತ್ತಿದ್ದಾರೆ.

ಗ್ರಾಮಸ್ಥರು ಹಲವಾರು ಸಾರಿ ಶಾಸಕರಿಗೆ ಮನವಿ ಸಲ್ಲಿಸಿದರು ಪ್ರಯೋಜನ ಆಗಿಲ್ಲ. ನಮ್ಮ ಮಕ್ಕಳಿಗೆ ಏನಾದರೂ ಆದರೆ ಏನು ಸ್ವಾಮಿ ಎನ್ನುವ ಪ್ರಶ್ನೆ ಗ್ರಾಮಸ್ಥರಲ್ಲಿ ಕಾಡುತ್ತಿದೆ.

ಬನ್ನಿಕೊಪ್ಪ ಗ್ರಾಮದಲ್ಲಿ ಹರಿಯುತ್ತಿರುವ ಹಳ್ಳಕ್ಕೆ ಬ್ರಿಜ್ ನಿರ್ಮಿಸುವಂತೆ ಮೂರ್ನಾಲ್ಕು ಬಾರಿ ಶಾಸಕರಿಗೆ ,ಸಂಸದರಿಗೆ, ಸಂಬಂಧಿಸಿದ ಇಲಾಖೆಯ ಸಚಿವರಲ್ಲಿ ಮನವಿಯನ್ನು ಗ್ರಾಮಸ್ಥರು ಕೊಟ್ಟಿದ್ದಾರಂತೆ.

ಇತ್ತೀಚಿಗೆ ನಡೆದ ಗ್ರಾಮ ವಾಸ್ತವ್ಯದಲ್ಲಿ ತಹಶೀಲ್ದಾರರ ಗಮನಕ್ಕೆ ತರಲಾಗಿದೆ ಎಂದು ಗ್ರಾಮಸ್ಥರು ಹೇಳಿದರು. ಸಂಬಂಧ ಪಟ್ಟ ಇಲಾಖೆಯವರು ಕೂಡಲೇ ಗಮನ ಹರಿಸಿ ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮಸ್ಥರಿಗೆ ಸುಗಮವಾಗಿ ಸಂಚಾರ ಮಾಡಲು ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ವರದಿ.ಸುರೇಶ ಲಮಾಣಿ ಪಬ್ಲಿಕ್ ನೆಕ್ಸ್ಟ ಗದಗ

Edited By : Nagesh Gaonkar
PublicNext

PublicNext

07/08/2022 10:57 pm

Cinque Terre

79.8 K

Cinque Terre

1

ಸಂಬಂಧಿತ ಸುದ್ದಿ