ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ : ಭಾರೀ ಮಳೆಗೆ ಮನೆಗೆ ನುಗ್ಗಿದ ಚರಂಡಿ ನೀರು: ಅವ್ಯವಸ್ಥೆ ಕಂಡು ಜನ ಕಣ್ಣೀರು

ವರದಿ: ಈರನಗೌಡ ಪಾಟೀಲ

ಹಾವೇರಿ: ವರುಣನ ಆರ್ಭಟಕ್ಕೆ ಮನೆಯೊಳಗೆ ನೀರು ನುಗ್ಗಿದ್ದು ಜನ ಪರದಾಟ ನಡೆಸಿದ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹರವಿ ಗ್ರಾಮದಲ್ಲಿ ನಡೆದಿದೆ. ದುರಸ್ತಿಗೊಳ್ಳದ ಚರಂಡಿಯಿಂದ ಈ ಸಮಸ್ಯೆ ಎದುರಾಗಿದ್ದು, ಜನ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳು ಮಳೆಗಾಲಕ್ಕೂ ಮುಂಚಿತವಾಗಿ ಚರಂಡಿಗಳನ್ನು ದುರಸ್ತಿ ಪಡಿಸಿಲ್ಲ. ಈ ಹಿನ್ನೆಲೆಯಲ್ಲಿ ಮಳೆಯ ನೀರು ಚರಂಡಿ ಮೂಲಕ ಸರಾಗವಾಗಿ ಹೋಗದೆ ಅಲ್ಲಲ್ಲಿ ಮನೆಗಳಿಗೆ ನುಗ್ಗಿದೆ. ಇದರಿಂದ ಮನೆಯ ಸುತ್ತಲೂ ನೀರು ನಿಂತು ಗೋಡೆಗಳು ನೆನೆದು ಬೀಳುವ ಹಂತದಲ್ಲಿದೆ. ಆದಷ್ಟು ಬೇಗ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಅವ್ಯವಸ್ಥೆ ಸರಿಪಡಿಸಬೇಕಿದೆ.

Edited By : Shivu K
PublicNext

PublicNext

02/08/2022 02:23 pm

Cinque Terre

23.19 K

Cinque Terre

0

ಸಂಬಂಧಿತ ಸುದ್ದಿ