ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಜಲಾವೃತವಾದ ಪ್ರದೇಶಕ್ಕೆ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಭೇಟಿ

ಗದಗ: ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣಕ್ಕೆ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಭೇಟಿ ನೀಡಿ ತಗ್ಗು ಪ್ರದೇಶಗಳಿಗೆ ಮಳೆಯ ನೀರು ನುಗ್ಗಿದರಿಂದ ಪರಿಶೀಲನೆ ಮಾಡಿದರು.

ಇನ್ನೂ ಪಟ್ಟಣದ ಇಟ್ಟಿಕೇರೆಯೂ ಕೋಡಿ ಬಿದ್ದು ಹರಿಯುತ್ತಿದ್ದು, ಸುತ್ತಮುತ್ತಲಿನ ಇರುವ ಮನೆಗಳು ಜಲಾವೃತವಾಗಿರುವುದರಿಂದ ಮನೆಗಳನ್ನು ವೀಕ್ಷಣೆ ಮಾಡಿದರು.

ಇಟ್ಟಿಕೇರೆಯ ಸುತ್ತಮುತ್ತಲಿನಲ್ಲಿ ಇರುವ ಮನೆಗಳಲ್ಲಿ ನಿನ್ನೆ ಸುರಿದ ಧಾರಾಕಾರ ಮಳೆಗೆ ಮನೆಗಳಲ್ಲಿ ನೀರು ನುಗ್ಗಿ ದವಸ ಧ್ಯಾನಗಳು ಹಾಳಾಗಿ ಹೋಗಿದ್ದು, ಮನೆಗಳು ಜಲಾವೃತವಾಗಿದ್ದರಿಂದ ಸ್ಥಳೀಯರು ಇಟ್ಟಿಕೇರೆಯ ನೀರನ್ನು ಹೊರಹಾಕಿ ಎಂದು ಜಿಲ್ಲಾಧಿಕಾರಿಗಳಿಗೆ ಸುತ್ತುವರೆದಿದ್ದರು.

ನಂತರ ಜಿಲ್ಲಾಧಿಕಾರಿ ಇಟ್ಟಿಕೇರೆಯ ಪಕ್ಕದಲ್ಲಿರುವ ಮನೆಗಳು ಜಲಾವೃತವಾಗಿದೆ ಕೂಡಲೇ ಅವರಿಗೆ ಬೇರೆ ಕಡೆ ವಸತಿ ಕಲ್ಪಿಸಿ ಎಂದು ತಹಶೀಲ್ದಾರ ಅವರಿಗೆ ಸೂಚಿಸಿದರು.

Edited By : Manjunath H D
PublicNext

PublicNext

06/09/2022 02:32 pm

Cinque Terre

31.01 K

Cinque Terre

0