ಗದಗ: ಗದಗ ಜಿಲ್ಲಾದ್ಯಾಂತ ಸೋಮವಾರ ರಾತ್ರಿ ಧಾರಾಕಾರವಾಗಿ ಸುರಿದ ಮಳೆಯಿಂದ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಮಜ್ಜೂರ ಗ್ರಾಮದ ದುರ್ಗಾದೇವಿಯ ಪಕ್ಕದಲ್ಲಿರುವ ಹಳ್ಳ ಬಂದಿದರಿಂದ 40 ಕ್ಕೂ ಹೆಚ್ಚು ಮನೆಗಳಿ ನೀರು ನುಗ್ಗಿದರಿಂದ ಭಯದಿಂದ ರಾತ್ರಿಯೇ ಗುಡ್ಡದ ಆಶ್ರಯ ಪಡೆದು ಜನರು ಪರದಾಡಿರುವ ಘಟನೆ ಜರುಗಿದೆ.
ಸೋಮುವಾರ ರಾತ್ರಿ ಜೋರು ಮಳೆಗೆ ಹಲೆವೆಡೆ ಅವಾಂತರ ಸೃಷ್ಟಿಯಾಗಿದೆ. ಜಿಲ್ಲೆಯ ಶಿರಹಟ್ಟಿ ತಾಲೂಕಿನ ಮಜ್ಜೂರ ಗ್ರಾಮದ ಹಳ್ಳದ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ಮಜ್ಜೂರ ಗ್ರಾಮದ ಮನೆಗಳಿಗೆ ಮಳೆ ನೀರು ನುಗ್ಗಿದ್ದರಿಂದ ಮನೆಯಲ್ಲಿದ್ದ ದವಸ ಧಾನ್ಯ ಹಾಗೂ ಇತರೆ ವಸ್ತುಗಳು ನೀರು ಪಾಲಾಗಿವೆ. ಮನೆಗಳಿಗೆ ಮಳೆಯ ನೀರು ನುಗ್ಗಿದ್ದರಿಂದ ಜನರು ಜನರ ಪರದಾಟ ನಡೆಸಿದ್ದು, ಮನೆಗೆ ನುಗ್ಗಿದ ಮಳೆ ನೀರನ್ನು ಹೊರ ಹಾಕಲು ಹರ ಸಾಹಸ ಪಡುತ್ತಿದ್ದಾರೆ.
PublicNext
06/09/2022 01:04 pm