ಬೆಳಗಾವಿ: ದೇಶದ ಮೊದಲ 20 ಸ್ಮಾರ್ಟ್ ಸಿಟಿಯಲ್ಲಿ ಸ್ಥಾನ ಗಿಟ್ಟಿಸಿ ಕೊಂಡಿದ್ದ ಬೆಳಗಾವಿ ನಗರದ ಸ್ಮಾರ್ಟ್ ರಸ್ತೆಗಳ ಗುಣಮಟ್ಟವನ್ನು ಅಳೆದು ಮೂರೇ ದಿನದಲ್ಲಿ ಸುರಿದ ಮಳೆಯೇ ಮತ್ತೊಂದು rank ನೀಡಿದೆ!
ಕೇಂದ್ರ ಮತ್ತು ರಾಜ್ಯ ಸರಕಾರದ ಒಟ್ಟು ಸಾವಿರ ಕೋಟಿ ರೂ.ಗಳ ಅನುದಾನದಲ್ಲಿ ಮುಕ್ಕಾಲು ಭಾಗದಷ್ಟು ಅನುದಾನವನ್ನು ಬೆಳಗಾವಿ ಸ್ಮಾರ್ಟ್ ಸಿಟಿ ರಸ್ತೆ ಹಾಗೂ ಒಳಚರಂಡಿ ನಿರ್ಮಾಣಕ್ಕೆ ವೆಚ್ಚ ಮಾಡಿದೆ. ಆದರೂ ಮಳೆಗಾಲದಲ್ಲಿ ಆ ರಸ್ತೆ ಹಾಗೂ ಒಳಚರಂಡಿಯ ಗುಣಮಟ್ಟವನ್ನು ಮಳೆಯ ನೀರು ಅಳೆಯುತ್ತಿದೆ.
ಬೆಳಗಾವಿ ಸ್ಮಾರ್ಟ್ ಸಿಟಿಯ ಬೇಜವಾಬ್ದಾರಿ ರಸ್ತೆ ಹಾಗೂ ಒಳಚರಂಡಿ ನಿರ್ಮಾಣ ಮಾಡಿರುವ ಫಲವಾಗಿ ಸ್ಮಾರ್ಟ್ ಆಗಬೇಕಿದ್ದ ಬೆಳಗಾವಿ ಕುರುಪಿಯಾಗಿದೆ. ಎಲ್ಲೆಂದರಲ್ಲಿ ರಸ್ತೆಯ ಮೇಲೆ ನೀರು ನಿಂತು ವಾಹನ ಸವಾರರು ಪರದಾಡುವ ಪರಿಸ್ಥಿತಿ ಎದುರಾಗಿದೆ.
ಗಾಂಧಿ ನಗರ, ಚೆನ್ನಮ್ಮ ವೃತ್ತ, ಪೋರ್ಟ್ ರಸ್ತೆ, ಅಶೋಕ ವೃತ್ತ ಸೇರಿದಂತೆ ಬಹುತೇಕ ಸ್ಮಾರ್ಟ್ ಸಿಟಿಯ ಸ್ಮಾರ್ಟ್ ರಸ್ತೆಯ ಮೇಲೆ ಮಳೆ ನೀರು ನಿಂತು ಸ್ಮಾರ್ಟ್ ಸಿಟಿ ಕಾಮಗಾರಿಯನ್ನು ಅಣಕಿಸುವಂತಿದೆ.
PublicNext
08/08/2022 10:20 pm