ಲಕ್ಷ್ಮೇಶ್ವರ: ತಾಲೂಕಿನ ಅಕ್ಕಿಗುಂದ ಗ್ರಾಮದ ಸಮೀಪದ ಚನ್ನಪಟ್ಟಣ ಗ್ರಾಮದಲ್ಲಿ ಅಕ್ರಮವಾಗಿ ಮರಳು ದಂಧೆ ನಡೆಯುತ್ತಿದ್ದು ಅಧಿಕಾರಿಗಳು ಮಾತ್ರ ಕಣ್ಣುಮುಚ್ಚಿಕೊಂಡು ಕುಳಿತುಕೊಂಡಿದ್ದಾರೆ.
ಅಕ್ಕಿಗುಂದ ಗ್ರಾಮದ ಸಮೀಪದ ಚನ್ನಪಟ್ಟಣ ಗ್ರಾಮದಲ್ಲಿ ಅಕ್ರಮವಾಗಿ ಮರಳು ದಂಧೆ ನಡೆಸುತ್ತಿದ್ದರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು ಹಾಗೂ ಪೊಲೀಸ್ ಅಧಿಕಾರಿಗಳು ಮಾತ್ರ ಕಂಡು ಕಾಣದಂತೆ ಮೌನ ವಹಿಸುತ್ತಿದ್ದಾರೆ.
ಚನ್ನಪಟ್ಟಣ ಗ್ರಾಮದ ಶೆಟ್ಟಿಕೆರೆ ಹಳ್ಳದಲ್ಲಿ ಸಂಗ್ರಹವಾದ ಮರಳನ್ನು ತೆಗೆದು ಹಗಲು ರಾತ್ರಿ ಎನ್ನದೇ ಹೊಡೆಯುತ್ತಿದ್ದಾರೆ. ಇನ್ನೂ ಚನ್ನಪಟ್ಟಣ ಗ್ರಾಮದ ಮಾಲ್ಕಿ ಜಮೀನುಗಳಲ್ಲಿ ಗುಂಪು ಗುಂಪಾಗಿ ಸಂಗ್ರಹ ಮಾಡಿ ಇಟ್ಟಿದ್ದಾರೆ.ಅಧಿಕಾರಿಗಳಿಗೆ ಫೋನ್ ಮಾಡಿ ಹೇಳಿದರು ಕ್ಯಾರೆ ಎನ್ನುತ್ತಿಲ್ಲ.
ಇನ್ನೊಂದು ಮಾಹಿತಿಯ ಪ್ರಕಾರ ಶಾಸಕ ರಾಮಣ್ಣ ಲಮಾಣಿಯವರು ಅಕ್ರಮ ಮರಳು ದಂಧೆಗೆ ದಾರಿ ಮಾಡಿ ಕೊಡುತ್ತಿದ್ದಾರೆ ಎನ್ನುವ ಮಾಹಿತಿ ಇದೆ. ಶಿರಹಟ್ಟಿ ತಹಶೀಲ್ದಾರರಿಗೆ ಹಾಗೂ ಆರ್.ಐ.ಅವರಿಗೆ ಪೋನ್ ಮಾಡಿ ಕೇಳಿದರೆ, ನಮಗೆ ಶಾಸಕರು ಹೇಳಿದ್ದಾರೆ ಎಂದು ಹೆಸರು ಹೇಳಲು ಇಚ್ಚಿಸಿದ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.
ಚನ್ನಪಟ್ಟಣ ಗ್ರಾಮದಲ್ಲಿ ಅಕ್ರಮವಾಗಿ ಮರಳು ದಂಧೆ ನಡೆಯುತ್ತಿದೆ ಎಂದು ಮಾಧ್ಯಮದವರು ಸುದ್ದಿ ಮಾಡಿದರು.
ಅವಾಗಿನಿಂದಲೂ ಅಕ್ರಮ ಮರಳು ದಂಧೆ ಬ್ರೇಕ್ ಬಿದ್ದಿತ್ತು.ಶಾಸಕರು ಹೇಳಿದಕ್ಕೆ ಈಗ ಮತ್ತೆ ಪ್ರಾರಂಭವಾಗಿದೆ ಎನ್ನುವ ಮಾಹಿತಿ ಕೇಳಿ ಬರುತ್ತಿದೆ.
PublicNext
01/06/2022 10:27 pm