ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ದೇಶದ ಮೊದಲ ಕೇಬಲ್ ಶೈಲಿಯ ರೈಲ್ವೇ ಸೇತುವೆ ನಿರ್ಮಾಣವಾಗುತ್ತಿದೆ.
ಉಧಾಂಪುರ-ಶ್ರೀನಗರ-ಬಾರಾಮುಲ್ಲಾ ರೈಲು ಯೋಜನೆ ವ್ಯಾಪ್ತಿಯಲ್ಲಿ ಈ ಸೇತುವೆಯನ್ನು ನಿರ್ಮಿಸಲಾಗುತ್ತಿದೆ. ಈ ಕಾಮಗಾರಿಯನ್ನು “ದೇಶದ ಎಂಜಿನಿಯರಿಂಗ್ ಕ್ಷೇತ್ರದ ವೈಶಿಷ್ಟ’ ಎಂದು ಕೇಂದ್ರ ರೈಲ್ವೇ ಇಲಾಖೆ ಟ್ವೀಟ್ ಮಾಡಿದೆ.
ಇನ್ನು ಈ ಸೇತುವೆಯ ವಿಶೇಷತೆ ಹೀಗಿದೆ ನೋಡಿ..
ನದಿಯ ಮೇಲ್ಮೆಯಿಂದ 331 ಮೀಟರ್ ಎತ್ತರದ ಪ್ರದೇಶದಲ್ಲಿ ನಿರ್ಮಾಣ
473.25 ಮೀಟರ್- ಒಟ್ಟು ಉದ್ದ
96- ಸೇತುವೆಗಳಿಗೆ ಆಧಾರವಾರ.
94.25 ಮೀಟರ್- ಕೇಂದ್ರ ಭಾಗದ ಒಡ್ಡು
120 ಮೀಟರ್- ಅಗಲ
ಇದು ರಿಯಾಸಿ ಜಿಲ್ಲೆಯ ಅಂಜಿ ನದಿಗೆ ಅಡ್ಡಲಾಗಿ 21.653 ಕೋಟಿ ರೂ.ವೆಚ್ಚದಲ್ಲಿ ಈ ಸೇತುವೆ ನಿರ್ಮಾಣವಾಗಲಿದೆ.
ಇದು ಜಗತ್ತಿನ ಎತ್ತರದ ರೈಲ್ವೇ ಸೇತುವೆಯಾಗಿದ್ದು, ಫ್ರಾನ್ಸ್ ನ ಐಫೆಲ್ ಟವರ್ ಗಿಂತ 35 ಮೀಟರ್ ಎತ್ತರವಾಗಿರುವ ಈ ರೈಲ್ವೇ ಸೇತುವೆ ಐಫೆಲ್ ಟವರ್ ರೀತಿಯಲ್ಲಿ ನಿರ್ಮಾಣವಾಗುತ್ತಿದೆ.
PublicNext
19/02/2022 10:28 am