ಅಥಣಿ: ಕಳೆದ ಎರಡು ದಿನಗಳ ಹಿಂದೆ ನಮ್ಮ ಪಬ್ಲಿಕ್ ನೆಕ್ಸ್ಟ್ ನಲ್ಲಿ "ಮಳೆಯ ಆರ್ಭಟಕ್ಕೆ ಕಂಗೆಟ್ಟ ಸತ್ತಿ ಗ್ರಾಮಸ್ಥ!" ಎಂಬ ಶೀರ್ಷಿಕೆಯಡಿ ಪ್ರಕಟಗೊಂಡ ಸುದ್ದಿಗೆ ಸ್ಪಂದಿಸಿದ ಅಥಣಿ ತಹಶಿಲ್ದಾರ ಸುರೇಶ ಮುಂಜೆ ಅವರು ಸತ್ತಿ ಗ್ರಾಮದ ಸಂತ್ರಸ್ತ ರೈತನ ಮನೆಗೆ ಇತರ ಅಧಿಕಾರಿಗಳ ಜೊತೆ ಬೇಟಿಕೊಟ್ಟು ಪರಿಶೀಲನೆ ನಡೆಸಿದರು.
ಇವತ್ತು ಮಧ್ಯಾಹ್ನ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಸತ್ತಿ ಗ್ರಾಮದಲ್ಲಿ ಮಳೆಯಿಂದ ಮನೆಗೆ ನೀರು ನುಗ್ಗಿ ಸಂತ್ರಸ್ತನಾಗಿದ್ದ ರೈತ ಧರೆಪ್ಪ ಬಾಳಿಗೇರಿ ಅವರ ಮನೆಗೆ ಭೇಟಿ ನೀಡಿ ಪರಿಶೀಲಿಸಿದರು. ಹಾಗೆಯೇ ಸತ್ತಿ ಗ್ರಾಮದ ಇತರ ಕಡೆಗೂ ಇದೇ ತರ ಸಮಸ್ಯೆಯಿರುವಲ್ಲಿ ಪರಿಶೀಲನೆ ನಡೆಸಿದರು.
ಸಂತ್ರಸ್ತನ ಮನೆ ತಗ್ಗು ಪ್ರದೇಶದಲ್ಲಿ ಇರುವುದರಿಂದ ಹೆಚ್ಚಿನ ಮಳೆಯಾಗಿ ನೀರು ಮನೆಗೆ ನುಗ್ಗಿ ಈ ಅವಘಡ ಸಂಭವಿಸಿದೆ, ಇದಕ್ಕೆ ಸಂಬಂಧಪಟ್ಟ ಮಾಹಿತಿ ಸಂಗ್ರಹಿಸಿ ಬೆಳಗಾವಿ ಜಿಲ್ಲಾಧಿಕಾರಿ ಅವರಿಗೆ ಸೂಕ್ತ ಕ್ರಮಕ್ಕಾಗಿ ಕಳಿಸುತ್ತಿದ್ದೆವೆ ಅವರು ಮುಂದಿನ ಕ್ರಮ ಕೈಗೊಳ್ಳುತ್ತಾರೆ, ಈ ವಿಷಯ ನಮ್ಮ ಗಮನಕ್ಕೆ ತಂದ ತಮ್ಮ ಸುದ್ದಿವಾಹಿನಿಗೆ ಅಭಿನಂದನೆ ಎಂದು ಅಥಣಿ ತಹಶಿಲ್ದಾರ ಸುರೇಶ ಮುಂಜೆ ಅವರು ತಿಳಿಸಿದರು.
ಈ ವೇಳೆ ಮಾತನಾಡಿದ ರೈತ ಭೀಮಪ್ಪ ಬಾಳಿಗೇರಿ ನಿಮ್ಮ ಪಬ್ಲಿಕ್‌ನೆಕ್ಸ್ಟ್ ಸುದ್ದಿವಾಹಿನಿ ಸುದ್ದಿ ಬಿತ್ತರಿಸಿದ ನಂತರ ನಮ್ಮ ಮನೆಗೆ ಅಧಿಕಾರಿಗಳು ಬಂದು ಪರಿಶೀಲಿಸಿ ಶೀಘ್ರ ಸೂಕ್ತ ವ್ಯವಸ್ಥೆ ಮಾಡಿಸುವ ಭರವಸೆ ನೀಡಿದ್ದಾರೆ, ನಮ್ಮಂತ ಬಡ ರೈತನ ಮನೆಗೆ ತಹಶಿಲ್ದಾರಂತ ದೊಡ್ಡ ಅಧಿಕಾರಿಗಳು ಬರುವಂತೆ ಮಾಡಿದ ತಮಗೆ ಧನ್ಯವಾದ ಎಂದರು.
PublicNext
08/09/2022 08:09 pm